ಚಿಕ್ಕನಾಯಕನಹಳ್ಳಿ: ಯೋಗವು ಕೇವಲ ದೈಹಿಕ ವ್ಯಾಯಾಮಕ್ಕೆ ಸೀಮಿತವಲ್ಲ. ಅದು ಒತ್ತಡದ ಬದುಕಿನಲ್ಲಿ ನೆಮ್ಮದಿ ಮತ್ತು ಆರೋಗ್ಯವನ್ನು ಸಮತೋಲನದಲ್ಲಿಡುವ ಜೀವನ ಕಲೆ ಎಂದು ರಾಮಕೃಷ್ಣ ಯೋಗ ಕೇಂದ್ರದ ಸಂಸ್ಥಾಪಕ ಪ್ರಶಾಂತ್ ಕುಮಾರ್ ಹೇಳಿದರು.

ತಾಲ್ಲೂಕಿನ ಕಂದಿಕೆರೆ ಹೋಬಳಿ ತೀರ್ಥಪುರದ ವಜ್ರ ತೀರ್ಥರಾಮೇಶ್ವರ ಸನ್ನಿಧಿಯಲ್ಲಿ ಭಾನುವಾರ ರಾಮಕೃಷ್ಣ ಯೋಗ ಕೇಂದ್ರದಿಂದ ಆಯೋಜಿಸಲಾಗಿದ್ದ ಯೋಗ ತರಬೇತಿ ಹಾಗೂ ನಮ್ಮ ಆಹಾರ-ನಮ್ಮ ಆರೋಗ್ಯ ಉಪನ್ಯಾಸದಲ್ಲಿ ಮಾತನಾಡಿದರು.

ದೈನಂದಿನ ಆಹಾರ ಪದ್ಧತಿ ಶರೀರದ ಮೇಲೆ ಬೀರುವ ಧನಾತ್ಮಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ಧ್ಯಾನ ಮತ್ತು ಶಿಥಿಲೀಕರಣ ತಂತ್ರಗಳ ಮೂಲಕ ಮನಸ್ಸಿನ ಒತ್ತಡ ನಿವಾರಿಸುವ ವಿಧಾನಗಳನ್ನು ಪ್ರಾಯೋಗಿಕವಾಗಿ ಕಲಿಸುವುದರ ಜತೆಗೆ ಕ್ರೀಡಾ ಚಟುವಟಿಕೆಗಳ ಮೂಲಕ ಯೋಗ ಬಂಧುಗಳಲ್ಲಿ ಉತ್ಸಾಹ ತುಂಬಲಾಯಿತು.

ಯೋಗ ಗುರು ಪುಟ್ಟಮಾದಪ್ಪ ವಿವಿಧ ಯೋಗಾಸನಗಳ ಪ್ರಾಮುಖ್ಯತೆ ವಿವರಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-17-2089540867

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.