ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾ | ಜೀರ್ಜಿಂಬೆ ಹಿಡಿಯಲು ಹೋದ ಮಕ್ಕಳು ಮರಳಿ ಬರಲೇ ಇಲ್ಲ

Last Updated 27 ಅಕ್ಟೋಬರ್ 2019, 6:15 IST
ಅಕ್ಷರ ಗಾತ್ರ

ಶಿರಾ (ತುಮಕೂರು ಜಿಲ್ಲೆ): ಆಟವಾಡಲು ಜೀಜಿಂಬೆ ಹಿಡಿಯಲು ಹೋದ 9 ವರ್ಷದ ಮಾರುತಿ ಮತ್ತು ಸಲ್ಮಾನ್ ಎಂಬ ಶಿರಾ ತಾಲ್ಲೂಕುಸಿಡಿಯಜ್ಜನಪಾಳ್ಯದ ಕಟ್ಟೆಯಲ್ಲಿ (ಚಿಕ್ಕ ಕೆರೆ) ಮುಳುಗಿ ಮೃತಪಟ್ಟಿದ್ದಾರೆ.

ಶಾಲೆಯಿಂದ ಶನಿವಾರ ಮಧ್ಯಾಹ್ನ ಮನೆಗೆ ಬಂದಿದ್ದ ಇಬ್ಬರು, ಆಟವಾಡಲು ಸಂಜೆ ಊರ ಹೊರಗೆ ಹೋಗಿದ್ದರು. ನಸುಕಾದರೂ ಮಕ್ಕಳು ಮನೆಗೆ ಬಂದಿರಲಿಲ್ಲ. ಗಾಬರಿಗೊಂಡ ಪೋಷಕರು ಊರಿನ ಕೇರಿ, ಹೊಲ, ಗದ್ದೆಗಳಲ್ಲಿ ಶನಿವಾರ ರಾತ್ರಿಯಲ್ಲಾ ಹುಡುಕಿದರು.

ಗ್ರಾಮಸ್ಥರೊಬ್ಬರು ಕಟ್ಟೆಯಲ್ಲಿ ಇಂದು ಬೆಳಿಗ್ಗೆ ಮುಳುಗು ಹುಡುಗಿದಾಗ ಮಕ್ಕಳ ಶವಗಳು ಪತ್ತೆಯಾಗಿವೆ. ತಂದೆ-ತಾಯಿ ಇಲ್ಲದ ಮಾರುತಿ ದೊಡ್ಡಪ್ಪನ ಮನೆಯಲ್ಲಿ ಇದ್ದ. ಜಾಫರ್ ಅವರಿಗೆ ಸಲ್ಮಾನ್ ಒಬ್ಬನೇ ಮಗ.

ಮಕ್ಕಳ ಸಾವಿನಿಂದಕಾಮಗೊಂಡನಹಳ್ಳಿಯಲ್ಲಿಶೋಕ ಮನೆ ಮಾಡಿದೆ.ದೀಪಾವಳಿ ಹಬ್ಬದ ಸಂಭ್ರಮವೇ ಮಾಯವಾಗಿದೆ. ಮಕ್ಕಳು ಕಾಮಗೊಂಡನಹಳ್ಳಿಯ ಈ ಮಕ್ಕಳುಆಟವಾಡುತ್ತ ಊರಿನಿಂದಸುಮಾರು 500 ಮೀಟರ್ ದೂರವಿರುವ ಪಕ್ಕದೂರಿನ ಕಟ್ಟೆಯವರೆಗೂ ಹೋಗಿದ್ದರು. ಮಕ್ಕಳು ಜೀರ್ಜಿಂಬೆಹಿಡಿಯುವ ಆಟವಾಡುತ್ತಿದ್ದರು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಕಟ್ಟೆಯ ಬಳಿ ಗುಂಪುಗೂಡಿದ್ದ ಗ್ರಾಮಸ್ಥರು
ಕಟ್ಟೆಯ ಬಳಿ ಗುಂಪುಗೂಡಿದ್ದ ಗ್ರಾಮಸ್ಥರು
ಸಂಬಂಧಿಕರ ರೋದನ ಕಂಡ ಗ್ರಾಮಸ್ಥರ ಕಣ್ಣಾಲಿಗಳು ತುಂಬಿ ಬಂದವು
ಸಂಬಂಧಿಕರ ರೋದನ ಕಂಡ ಗ್ರಾಮಸ್ಥರ ಕಣ್ಣಾಲಿಗಳು ತುಂಬಿ ಬಂದವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT