ಭಾನುವಾರ, ಜುಲೈ 25, 2021
22 °C
ಜಕ್ಕೇನಹಳ್ಳಿ ಅಹೋಬಲ ಲಕ್ಷ್ಮಿನರಸಿಂಹ ಸ್ವಾಮಿ ದೇವಾಲಯದ ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದ ಚಿರಂಜೀವಿ ಸರ್ಜಾ

ಅಜ್ಜಿ ಮನೆ ರಥೋತ್ಸವಕ್ಕೆ ಹಾಜರಾಗುತ್ತಿದ್ದ ಚಿರಂಜೀವಿ ಸರ್ಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಧುಗಿರಿ: ನಟ ಚಿರಂಜೀವಿ ಸರ್ಜಾ ಓದಿದ್ದು ಮತ್ತು ಬೆಳೆದಿದ್ದು ಬೆಂಗಳೂರಾದರೂ ತಾಲ್ಲೂಕಿನ ಜಕ್ಕೇನಹಳ್ಳಿಯ ಜತೆಯೂ ಒಡನಾಟ ಹೊಂದಿದ್ದರು. ಅವರ ತಾಯಿಯ ತವರು ಜಕ್ಕೇನಹಳ್ಳಿ. ಈ ಕಾರಣದಿಂದ ತನ್ನ ಅಜ್ಜಿ ಮನೆಗೆ ವರ್ಷಕ್ಕೆ ಒಮ್ಮೆಯಾದರೂ ಭೇಟಿ ನೀಡುತ್ತಿದ್ದರು.

ನಟ ದಿವಂಗತ ಶಕ್ತಿ ಪ್ರಸಾದ್ ಹಾಗೂ ಲಕ್ಷ್ಮಿದೇವಮ್ಮ ಅವರ ಪುತ್ರಿ ಅಮ್ಮಾಜಿ ಅವರ ಹಿರಿಯ ಪುತ್ರ ಚಿರಂಜೀವಿ ಸರ್ಜಾ. ಜಕ್ಕೇನಹಳ್ಳಿಯಲ್ಲಿ ಶಕ್ತಿ ಪ್ರಸಾದ್ ಅವರ ಸಮಾಧಿ, ತೋಟ, ಮನೆ ಇದೆ.

ಗ್ರಾಮದ ಅಹೋಬಲ ಲಕ್ಷ್ಮಿನರಸಿಂಹ ಸ್ವಾಮಿ ದೇವಾಲಯವನ್ನು ಈ ಕುಟುಂಬ ನಿರ್ಮಿಸಿದೆ. ದೇಗುಲದ ಉಸ್ತುವಾರಿ ಸಹ ಈ ಕುಟುಂಬದ್ದೇ ಆಗಿದೆ. ಪ್ರತಿ ವರ್ಷ ನಡೆಯುವ ಅಹೋಬಲ ಲಕ್ಷ್ಮಿನರಸಿಂಹ ಸ್ವಾಮಿ ಬ್ರಹ್ಮರಥೋತ್ಸವದಲ್ಲಿ ಚಿರಂಜೀವಿ ಸರ್ಜಾ ಕುಟುಂಬ ಸಮೇತ ಪಾಲ್ಗೊಳ್ಳುತ್ತಿದ್ದರು. ಕಳೆದ ಮಾ.9ರಂದು ನಡೆದ ಜಾತ್ರಾ ಮಹೋತ್ಸವದಲ್ಲಿ ಪತ್ನಿ ಮೇಘನಾ ರಾಜ್ ಅವರ ಜತೆ ಪಾಲ್ಗೊಂಡಿದ್ದರು. ಕುಟುಂಬದವರು ಜತೆ ದೇವರಿಗೆ ಆರತಿ ಸೇವೆ ಸಲ್ಲಿಸಿದ್ದರು.

ಚಿರಂಜೀವಿ ಸರ್ಜಾ ಜಕ್ಕೇನಹಳ್ಳಿಗೆ ಬರುತ್ತಾರೆ ಎನ್ನುವುದು ತಿಳಿದರೆ ಸುತ್ತಮುತ್ತಲ ಹಳ್ಳಿಗಳ ಅಭಿಮಾನಿಗಳು, ಜನರು ಇವರನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದರು.

ಚಿರಂಜೀವಿ ಸರ್ಜಾ ಅವರ ಅಜ್ಜಿ ಲಕ್ಷ್ಮಿದೇವಮ್ಮ ಕಾಂಗ್ರೆಸ್ ಪಕ್ಷದಿಂದ ಜಿಲ್ಲಾ ಪರಿಷತ್ ಸದಸ್ಯರಾಗಿಯೂ ಆಯ್ಕೆಯಾಗಿದ್ದರು. ಬೆಂಗಳೂರಿನಲ್ಲಿ ಇದ್ದ ಲಕ್ಷ್ಮಿದೇವಮ್ಮ ಶನಿವಾರ ಜಕ್ಕೇನಹಳ್ಳಿಗೆ ಬಂದಿದ್ದರು. ಮೊಮ್ಮಗನ ಸಾವಿನ ಸುದ್ದಿ ಕೇಳಿ ಬೆಂಗಳೂರಿಗೆ ತೆರಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು