ಶುಕ್ರವಾರ, ನವೆಂಬರ್ 15, 2019
27 °C

ಯುವಕನ ಕೊಲೆ; ಬೆಚ್ಚಿ ಬಿದ್ದ ಜನ

Published:
Updated:

ತುಮಕೂರು: ಗೋಧೂಳಿ ಸಮಯದಲ್ಲಿ ನಗರದ ಶಿರಾ ಗೇಟ್‌ನ ನಾಗಣ್ಣನ ಪಾಳ್ಯದ ಸಮೀಪ ವ್ಯಕ್ತಿಯ ಕೊಲೆ ನಡೆದಿದ್ದು, ಮತ್ತೊಬ್ಬರು ತೀವ್ರ ಗಾಯಗೊಂಡಿದ್ದಾರೆ.

ಶಿರಾ ಗೇಟ್‌ ನಿವಾಸಿ ಮಹಾಂತೇಶ್‌ (26) ಕೊಲೆಯಾದ ವ್ಯಕ್ತಿ, ಮಂಜುನಾಥ್‌ (36) ಹಲ್ಲೆಯಿಂದ ಗಾಯಗೊಂಡಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಹಾಂತೇಶ್‌ ಹಾಗೂ ಮಂಜುನಾಥ್‌ ಬೈಕ್‌ನಲ್ಲಿ ಸಂಜೆ 5.30ರ ಸಮಯದಲ್ಲಿ ಶಾಲೆಯಿಂದ ಮಂಜುನಾಥ್‌ ಮಗುವನ್ನು ಕರೆದುಕೊಂಡು ಬರಲು ಹೋಗುತ್ತಿದ್ದಾಗ ದುಷ್ಕರ್ಮಿಗಳು ಹೊಂಚು ಹಾಕಿ ಕೊಲೆ ಮಾಡಿದ್ದಾರೆ. ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಾಂತೇಶ್‌ ಕೆಲವು ಸಣ್ಣ ಪುಟ್ಟ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಈಚೆಗೆ ನಗರದ ಹೊರವಲಯದಲ್ಲಿ ರೌಡಿಶೀಟರ್‌ ಚಟ್ಟ ಮೋಹನ್‌ ಹಾಗೂ ಮಹಿಳೆಯ ಕೊಲೆ ಪ್ರಕರಣಗಳು ನಡೆದಿದ್ದವು. ಈ ಘಟನೆಗಳ ನೆನಪು ಮಾಸುವ ಮುನ್ನವೇ ಮತ್ತೊಂದು ಕೊಲೆ ನಡೆದಿದ್ದು ನಗರದ ಜನರನ್ನು ಬೆಚ್ಚಿ ಬೀಳಿಸಿದೆ.

ಪ್ರತಿಕ್ರಿಯಿಸಿ (+)