ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದಾಯ ಭವನ, ರಸ್ತೆ ಅಭಿವೃದ್ಧಿಗೆ ಆದ್ಯತೆ; ಶಾಸಕ ವೆಂಕಟರಮಣಪ್ಪ

ಶೇ 100 ರಷ್ಟು ಅನುದಾನ ಬಳಕೆ
Last Updated 23 ಸೆಪ್ಟೆಂಬರ್ 2021, 3:30 IST
ಅಕ್ಷರ ಗಾತ್ರ

ಪಾವಗಡ: ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಗ್ರಾಮೀಣ ಭಾಗದ ಬಹುತೇಕ ಸಮುದಾಯ ಭವನ ನಿರ್ಮಾಣ, ರಸ್ತೆ ಅಭಿವೃದ್ಧಿಗೆ ಶಾಸಕವೆಂಕಟರಮಣಪ್ಪ ಆದ್ಯತೆ ನೀಡಿದ್ದಾರೆ.

ಪದವಿ ಪೂರ್ವ ಕಾಲೇಜು ಸಭಾಂಗಣ, ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣ, ನಿಡಗಲ್‌ ಗ್ರಾಮದ ಮುಖ್ಯ ದ್ವಾರದಲ್ಲಿ ಆರ್ಚ್‌, ಶಾಲಾ, ಕಾಲೇಜುಗಳ ಕಟ್ಟಡ ನಿರ್ಮಾಣ, ತಂಗುದಾಣ, ರಸ್ತೆ, ಸೇತುವೆ ಕಾಮಗಾರಿಗಳಿಗೆ ಅನುದಾನ ಬಳಕೆಯಾಗಿದೆ.

ಮೂರು ವರ್ಷದಲ್ಲಿ ಬಿಡುಗಡೆಯಾದ ಶಾಸಕರ ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಂಡಿರುವುದಾಗಿ ದಾಖಲೆಗಳಲ್ಲಿ ಮಾಹಿತಿ ಇದೆ. ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದ್ದು ಕೆಲ ಕಾಮಗಾರಿಗಳು
ಪ್ರಗತಿಯಲ್ಲಿವೆ.

ಮೂರು ವರ್ಷದಲ್ಲಿ ಸರ್ಕಾರದಿಂದ ಬಿಡುಗಡೆಯಾಗಿರುವ ₹5 ಕೋಟಿ ಅನುದಾನದಲ್ಲಿ ಹೆಚ್ಚಿನ ಹಣವನ್ನು ವಿವಿಧ ಸಮುದಾಯಗಳ ಸಮುದಾಯ ಭವನ, ದೇಗುಲಗಳ ಅಭಿವೃದ್ಧಿಗೆ ಬಳಸಲಾಗಿದೆ.

2018ನೇ ಸಾಲಿನಲ್ಲಿ ₹2 ಕೋಟಿ ವೆಚ್ಚದ 30 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಅವುಗಳಲ್ಲಿ ₹5 ಲಕ್ಷ ವೆಚ್ಚದ ಕೆಂಚಮ್ಮನಹಳ್ಳಿ ಪ್ರೌಢಶಾಲಾ ಕಟ್ಟಡ ನಿರ್ಮಾಣ ಸೇರಿದಂತೆ 17 ಕಾಮಗಾರಿ ಪೂರ್ಣಗೊಂಡಿವೆ. ನಿಡಗಲ್‌ ಗ್ರಾಮದ ಮುಖ್ಯ ದ್ವಾರದಲ್ಲಿ ₹3 ಲಕ್ಷ ವೆಚ್ಚದ ಆರ್ಚ್‌, 10 ಲಕ್ಷ ವೆಚ್ಚದ ಪದವಿ ಪೂರ್ವ ಕಾಲೇಜು ಸಭಾಂಗಣ ಸೇರಿದಂತೆ ಇತರೆ 13 ಕಾಮಗಾರಿಗಳು
ಪ್ರಗತಿಯಲ್ಲಿವೆ.

2019ನೇ ಸಾಲಿನಲ್ಲಿ ಶಾಸಕ ವೆಂಕಟರಮಣಪ್ಪ ಅವರು ಸಾರ್ವಜನಿಕರು ಹಾಗೂ ಆಯಾ ಭಾಗದ ಮುಖಂಡರ ಮನವಿಯಂತೆ ₹2 ಕೋಟಿ ವೆಚ್ಚದ 31 ಕಾಮಗಾರಿಗಳಿಗೆ ಪಟ್ಟಿ ನೀಡಿದ್ದರು. ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಕಂಪ್ಯೂಟರ್‌, ಯುಪಿಎಸ್‌ ಖರೀದಿಗೆ ₹5 ಲಕ್ಷ,
₹8 ಲಕ್ಷ ವೆಚ್ಚದ ವೈ.ಎನ್.ಹೊಸಕೋಟೆ ರಸ್ತೆ ಮೋರಿ
ಕಾಮಗಾರಿ
ಸೇರಿದಂತೆ 13 ಕಾಮಗಾರಿ ಪೂರ್ಣಗೊಂಡಿದೆ. ಪಟ್ಟಣದ ಯಾದವ ವಿದ್ಯಾರ್ಥಿ ನಿಲಯದ ₹5 ಲಕ್ಷ ವೆಚ್ಚದ ಕಾಮಗಾರಿ, ಕೆಲ ಸಮುದಾಯ ಭವನ ಕಾಮಗಾರಿ ಮುಕ್ತಾಯದ ಹಂತದಲ್ಲಿವೆ ಎಂದು ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.

2020ನೇ ಸಾಲಿನಲ್ಲಿ 36 ಕಾಮಗಾರಿಗಳಿಗೆ ಪಟ್ಟಿ ಸಿದ್ಧಪಡಿಸಿದ್ದರೂ ಸರ್ಕಾರ ಅನುದಾನದಲ್ಲಿ ಕಡಿತ ಮಾಡಿದ್ದರಿಂದ ₹1 ಕೋಟಿ ವೆಚ್ಚದ 17 ಕಾಮಗಾರಿಗಳ ಪಟ್ಟಿ ನೀಡಿದ್ದಾರೆ. ವೆಂಕಟಾಪುರ ಗ್ರಾಮದಲ್ಲಿ ಬಲಿಜ ಸಮುದಾಯ ಭವನಕ್ಕೆ ₹10 ಲಕ್ಷ, ಪೊನ್ನ ಸಮುದ್ರ ವಿಎಸ್‌ಎಸ್‌ಎನ್ ಕಟ್ಟಡ ನಿರ್ಮಾಣ ಕಾಮಗಾರಿಗೆ ₹10 ಲಕ್ಷ ಸೇರಿದಂತೆ ರಸ್ತೆ ಕಾಮಗಾರಿ, ಸಮುದಾಯ ಭವನ ಕಾಮ
ಗಾರಿಗಳಿಗೆ ಅನುದಾನ ವಿನಿಯೋಗಿಸಲಾಗಿದೆ. 2020ನೇ ಸಾಲಿನ ಬಹುತೇಕ ಕಾಮಗಾರಿಗಳು ಪ್ರಗತಿಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT