ಗೆಲ್ಲುವ ವಿಶ್ವಾಸ ಇದೆ: ಶ್ರೀನಿವಾಸ್‌ ಕಲ್ಕೆರೆ

ಸೋಮವಾರ, ಏಪ್ರಿಲ್ 22, 2019
32 °C

ಗೆಲ್ಲುವ ವಿಶ್ವಾಸ ಇದೆ: ಶ್ರೀನಿವಾಸ್‌ ಕಲ್ಕೆರೆ

Published:
Updated:
Prajavani

ತುಮಕೂರು: ಈ ಚುನಾವಣೆಯಲ್ಲಿ ಎಲ್ಲರ ನಿರೀಕ್ಷೆ ಮೀರಿ ನಾನು ಜಯಗಳಿಸುವ ವಿಶ್ವಾಸ ಇದೆ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ವಿ.ಶ್ರೀನಿವಾಸ್‌ ಕಲ್ಕೆರೆ ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯ ನೀರಿನ ಸಮಸ್ಯೆ ಪರಿಹಾರ, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವುದು ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವ ಕನಸಿನೊಂದಿಗೆ ಕಣದಲ್ಲಿದ್ದೇನೆ’ ಎಂದರು.

‘ಮೈತ್ರಿ ಪಕ್ಷದ ಅಭ್ಯರ್ಥಿ ಎಚ್‌.ಡಿ.ದೇವೇಗೌಡ ಮತ್ತು ಬಿಜೆಪಿ ಅಭ್ಯರ್ಥಿ ಜಿ.ಎಸ್‌.ಬಸವರಾಜು– ಇಬ್ಬರನ್ನೂ ಜಿಲ್ಲೆಯ ಮತದಾರರು ತಿರಸ್ಕರಿಸಬೇಕು’ ಎಂದರು.

ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ದೇವೇಗೌಡರ ಮನಸ್ಸಿನಲ್ಲಿ ಅಭಿವೃದ್ಧಿ ಚಿಂತನೆ ಇರಬಹುದು. ಆದರೆ ಅವರ ಶರೀರ ಸ್ಪಂದಿಸುವುದು  ಕಷ್ಟ. ಬಸವರಾಜು ಅಧಿಕಾರದ ದಾಹದಿಂದ ಅವರ ಬಳಿ ಅಭಿವೃದ್ಧಿ ಚಿಂತನೆಗಳೇ ಇಲ್ಲ. ಅವರು ಕೇವಲ ಮೋದಿ ಹೆಸರಿನಲ್ಲಿ ಮತ ಯಾಚಿಸುತ್ತಿದ್ದಾರೆ ಎಂದು ದೂರಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !