ಬುಧವಾರ, ನವೆಂಬರ್ 20, 2019
27 °C

ಆಧಾರ್ ಲಿಂಕ್ ಅವಧಿ ವಿಸ್ತರಣೆಗೆ ಕಾಂಗ್ರೆಸ್ ಮನವಿ

Published:
Updated:
Prajavani

ತುಮಕೂರು: ’ಮತದಾರರ ಗುರುತಿನ ಚೀಟಿಗೆ (ಎಪಿಕ್ ಕಾರ್ಡ್) ಆಧಾರ್ ಗುರುತಿನ ಚೀಟಿ ಸಂಖ್ಯೆ ಲಿಂಕ್ ಮಾಡಲು ಮಂಗಳವಾರ (ಅ.15) ಕೊನೆಯ ದಿನಾಂಕ ನಿಗದಿಪಡಿಸಿದ್ದು, ಈ ಅವಧಿಯನ್ನು ಇನ್ನೂ ಒಂದು ತಿಂಗಳ ವಿಸ್ತರಣೆ ಮಾಡಬೇಕು’ ಎಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕವು ಸೋಮವಾರ ಹೆಚ್ಚು ವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಅವರಿಗೆ ಮನವಿ ಸಲ್ಲಿಸಿತು.

’ತುಮಕೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ಇನ್ನೂ ಸಾಕಷ್ಟು ಜನರು ಲಿಂಕ್ ಮಾಡಿಸಿಲ್ಲ.  ಲಿಂಕ್ ಮಾಡಿಸಲು ಅ.15 ಕೊನೆಯ ದಿನಾಂಕ ಎಂಬುದು ಸರಿಯಾಗಿ ಜನರಿಗೂ ತಿಳಿಸಿಲ್ಲ. ಹಾಗಾಗಿ ಇನ್ನೂ ಹೆಚ್ಚಿನ ರೀತಿ ಪ್ರಚಾರ ಮಾಡಿ ಲಿಂಕ್ ಮಾಡಿಸಲು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು’ ಎಂದು ಮನವಿ ಮಾಡಿತು.

’ಲಿಂಕ್ ಮಾಡುವ ಅವಧಿಯನ್ನು ಇನ್ನೂ ಒಂದು ತಿಂಗಳ ವಿಸ್ತರಣೆ ಮಾಡಬೇಕು’ ಎಂದು ಕೋರಿತು.

ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎಚ್.ಅತೀಕ್ ಅಹಮ್ಮದ್ ಅವರು ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಪ್ರತಿಕ್ರಿಯಿಸಿ (+)