ತುಮಕೂರು: ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಹಾಗೂ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದ ಟೌನ್ಹಾಲ್ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಅಡುಗೆ ಅನಿಲ ಪೂರೈಕೆ ಸ್ಥಗಿತಗೊಳ್ಳಲು ಕೇಂದ್ರ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದರು. ಕೇಂದ್ರದ ವಿರುದ್ಧ ಘೋಷಣೆ ಕೂಗಿದರು. ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆಗೆ ಆಗ್ರಹಿಸಿದರು.

ಇನ್ನಷ್ಟು ದಿನಗಳ ಕಾಲ ಯುದ್ಧ ಮುಂದುವರಿದರೆ ಪೆಟ್ರೋಲ್, ಡೀಸೆಲ್ ಬೆಲೆಯೂ ಏರಿಕೆಯಾಗಲಿದೆ. ಇಂಧನ ಬೆಲೆ ಹೆಚ್ಚಳವಾದರೆ ಸರಕು ಸಾಗಣೆ ವೆಚ್ಚ ಅಧಿಕವಾಗಿ ಎಲ್ಲ ಪದಾರ್ಥಗಳು ದುಬಾರಿಯಾಗಲಿವೆ. ಇದು ಜನಸಾಮಾನ್ಯರಿಗೆ ಹೊರೆಯಾಗಲಿದೆ ಎಂದು ಟೀಕಿಸಿದರು.

ಯುದ್ಧ ಆರಂಭವಾದರೆ ಪೆಟ್ರೋಲಿಯಂ ಉತ್ಪಗಳ ಕೊರತೆ ಉಂಟಾಗಲಿದೆ ಎಂಬುದು ಗೊತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಯಾವುದೇ ಮುನ್ನೆಚ್ಚರಿಕೆ ವಹಿಸಲಿಲ್ಲ. ಆಡಳಿತ ವೈಫಲ್ಯದಿಂದ ಸಾರ್ವಜನಿಕರು ಸಮಸ್ಯೆ ಎದುರಿಸಬೇಕಾಗಿದೆ. ಆಡಳಿತ ನಡೆಸಲು ವಿಫಲರಾಗಿರುವ ಮೋದಿ ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಹಣ ಕೊಟ್ಟರೂ ಅಡುಗೆ ಅನಿಲ ಸಿಗುತ್ತಿಲ್ಲ. ಮತ್ತೊಂದೆಡೆ ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಯಾವುದರ ಮೇಲೂ ಕೇಂದ್ರ ಸರ್ಕಾರಕ್ಕೆ ನಿಯಂತ್ರಣ ಇಲ್ಲವಾಗಿದೆ. ತಕ್ಷಣ ಸಮಸ್ಯೆ ಪರಿಹರಿಸಿ, ಜನಸಾಮಾನ್ಯರ ಹೊರೆ ಇಳಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್ಗೌಡ, ಮುಖಂಡರಾದ ಎಸ್.ರಫೀಕ್ ಅಹ್ಮದ್, ಎನ್.ಗೋವಿಂದರಾಜು, ಟಿ.ಎಂ.ಮಹೇಶ್, ಫಯಾಜ್ ಅಹ್ಮದ್, ಸೈಯದ್ ನಯಾಜ್ ಅಹ್ಮದ್, ಷಣ್ಮುಖಪ್ಪ, ರೇವಣ್ಣಸಿದ್ಧಯ್ಯ, ಕೆಂಪಣ್ಣ, ಮೆಹಬೂಬ್ ಪಾಷಾ, ಆಟೊರಾಜು, ಬಿ.ಜಿ.ನಿಂಗರಾಜು, ಸುಜಾತ, ಅಂಬರೀಷ್, ಶಿವಾಜಿ, ನಟರಾಜಶೆಟ್ಟಿ, ಪಂಡಿತ್ ನಾರಾಯಣಪ್ಪ, ಜ್ವಾಲಮಾಲ ರಾಜಣ್ಣ, ಭಾಗ್ಯಮ್ಮ, ನಾಗಮಣಿ, ಕೆಂಪರಾಜು, ವಿಜಯಲಕ್ಷ್ಮಿ, ವೆಂಕಟೇಶ್, ಬೈಲಾಸ್ವಾಮಿ, ಕೈದಾಳ ರಮೇಶ್ ಪಾಲ್ಗೊಂಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.