ಭಾನುವಾರ, ನವೆಂಬರ್ 17, 2019
27 °C
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ 65ನೇ ವಾರ್ಷಿಕ ಮಹಾಸಭೆಯಲ್ಲಿ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿಕೆ

ಜಾತ್ಯತೀತವಾಗಿದ್ದರೆ ಸಹಕಾರಿ ಆಂದೋಲನ ಯಶಸ್ಸು

Published:
Updated:
Prajavani

ತುಮಕೂರು:  ‘ಸಹಕಾರಿ ಆಂದೋಲನ ಪಕ್ಷಾತೀತ, ಜಾತ್ಯಾತೀತವಾಗಿರಬೇಕು. ಇದರಲ್ಲಿ ಯಾವುದೇ ತಾರತಮ್ಯ ಇರಬಾರದು’ ಎಂದು ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದರು.

ನಗರದ ಡಯಟ್ ಕಾಲೇಜು ಆವರಣದಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ 65ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರು ಸಹಕಾರ ಕೇಂದ್ರ ಬ್ಯಾಂಕ್‌ನ ಶಾಖೆಗಳಲ್ಲಿ ಖಾತೆಗಳನ್ನು ತೆರೆದು ಠೇವಣಿ ಇಟ್ಟರೆ ಅದರಿಂದ ರೈತರಿಗೆ, ಅವಶ್ಯಕತೆ ಇದ್ದವರಿಗೆ ಸಾಲ ಸೌಲಭ್ಯ ನೀಡಲು ಅನುಕೂಲ ಆಗುತ್ತದೆ ಎಂದು ತಿಳಿಸಿದರು.

’ಕೃಷಿ ಮಾಡುವವರ ಕಷ್ಟ ಏನು ಎಂಬುದು ನನಗೆ ತಿಳಿದಿದೆ. ಹಾಗಾಗಿ, ರೈತರಿಗೆ ನ್ಯಾಯ ಒದಗಿಸಬೇಕು ಎಂದು ಬ್ಯಾಂಕ್‌ನಿಂದ ಸಾಲ ನೀಡವುದರ ಜತೆಗೆ ಮೃತಪಟ್ಟ ರೈತರ ಒಂದು ಲಕ್ಷದವರೆಗಿನ ಸಾಲ ಮನ್ನಾ ಮಾಡಲಾಗುತ್ತಿದೆ. ಇದೆಲ್ಲಾ ನಮ್ಮ ಬ್ಯಾಂಕಿನ ಲಾಭಾಂಶದಿಂದ ಮಾಡಲಾಗುತ್ತಿದೆ’ ಎಂದು ಹೇಳಿದರು.

’ಜನರ ವಿಶ್ವಾಸವನ್ನು ಗಳಿಸಿದ್ದರ ಪರಿಣಾಮವಾಗಿ ಇಂದು ಬ್ಯಾಂಕು ₹ 1 ಸಾವಿರ ಕೋಟಿ ಬಂಡವಾಳ ಹೊಂದಿದೆ. ಇದಕ್ಕೆ ಸಹಕಾರದ ನಿರ್ದೇಶಕರು, ಸದಸ್ಯರು, ಬ್ಯಾಂಕಿನ ಆಡಳಿತವರ್ಗ, ಸಿಬ್ಬಂದಿ ಶ್ರಮ ಸಾಕಷ್ಟಿದೆ’ ಎಂದು ತಿಳಿಸಿದರು.

ಸಹಕಾರಿ ಬ್ಯಾಂಕುಗಳಲ್ಲಿನ ಸಾಲ ಮನ್ನಾ ವಿಚಾರದಲ್ಲಿನ ಲೋಪಗಳ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ಚರ್ಚಿಸಲಾಗಿದೆ. ಜಿಲ್ಲೆಯಲ್ಲಿ ₹ 1400 ಕೋಟಿ ಸಾಲ ಮನ್ನಾ ಘೋಷಣೆ ಮಾಡಿದ್ದಾರೆ. ಇದರಲ್ಲಿ ಯಾರಿಗೂ ತಾರತಮ್ಯ ಮಾಡದೇ ಸಾಲ ಸೌಲಭ್ಯ ನೀಡಲಾಗುತ್ತದೆ ಎಂದರು.

ಸಹಕಾರಿ ಮಂಡಳಿಯ ಅಧ್ಯಕ್ಷ ಎನ್.ಗಂಗಣ್ಣ ಮಾತನಾಡಿದರು.

ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಜಿಲ್ಲೆಯ ವಿವಿಧ ತಾಲ್ಲೂಕುಗಳ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಕುಬೇಂದ್ರ ನಾಯ್ಕ್ ವಾರ್ಷಿಕ ವರದಿ ಮಂಡಿಸಿದರು.

ನಿರ್ದೇಶಕರಾದ ಕೆ.ಷಡಕ್ಷರಿ, ಎಸ್.ಲಕ್ಷ್ಮಿನಾರಾಯಣ, ತಾಳೇಮರದ ನರಸಿಂಹಯ್ಯ, ಬಿ.ಶಿವಣ್ಣ, ಜಿ.ಜೆ.ರಾಜಣ್ಣ, ಎಸ್.ಹನುಮಾನ್, ಎಸ್.ಆರ್.ರಾಜಕುಮಾರ್, ಬಿ.ಎಸ್.ದೇವರಾಜು, ಎಂ.ವಿ.ರಾಮಚಂದ್ರ, ಜಿ.ಎಸ್.ರವಿ, ಎಚ್.ಟಿ,ತಿಮ್ಮರಾಜು, ಆರ್.ಜೆ,.ಕಾಂತರಾಜು, ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರ, ಜಂಗಮಪ್ಪ, ರಾಮಪ್ರಸಾದ್, ಚನ್ನಮಲ್ಲಪ್ಪ, ಅನಿಲ್, ಇಂದಿರಾ ದೇನಾ ನಾಯ್ಕ್ ಇದ್ದರು.

ಪ್ರತಿಕ್ರಿಯಿಸಿ (+)