ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೈವಿಕ ಇಂಧನವಾಗಿ ಜೋಳ ಬಳಕೆ’

ಜೋಳ ತಳಿ ವಂಶವಾಹಿನಿ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪನೆ
Last Updated 4 ಡಿಸೆಂಬರ್ 2021, 2:45 IST
ಅಕ್ಷರ ಗಾತ್ರ

ಕುಣಿಗಲ್ (ತುಮಕೂರು):ಅತ್ಯಂತ ಕಡಿಮೆ ನೀರಿನ ಆಶ್ರಯದಲ್ಲಿ ಬೆಳೆಯುವ ಜೋಳ ಭವಿಷ್ಯದ ಆಹಾರಧಾನ್ಯವಾಗಿದೆ.ಹೆಚ್ಚು ನೀರು ಬೇಡುವ ಆಹಾರಧಾನ್ಯಗಳ ಪ್ರಾಮುಖ್ಯತೆ ನೀರಿನ ಕೊರತೆಯಿಂದ ಮೂಲೆಗುಂಪಾಗಲಿದೆ ಎಂದುನವದೆಹಲಿಯ ‘ಟ್ರಸ್ಟ್‌ ಫಾರ್ ಅಡ್ವಾನ್ಸ್‌ಮೆಂಟ್‌ ಆಫ್ ಅಗ್ರಿಕಲ್ಚರ್ ಸೈನ್ಸ್’ (ಟಿಎಎಎಸ್‌) ಅಧ್ಯಕ್ಷ ರಾಜೇಂದ್ರ ಸಿಂಗ್ ಪರೋಡ ಅಭಿಪ್ರಾಯಪಟ್ಟಿದ್ದಾರೆ.

ತಾಲ್ಲೂಕಿನ ರಂಗಸ್ವಾಮಿಗುಡ್ಡದ ಕಾವಲ್ ಪ್ರದೇಶದ ಕೃಷಿ ಸಂಶೋಧನ ಕೇಂದ್ರದ 12 ಎಕರೆ ಪ್ರದೇಶದಲ್ಲಿ ಅಂತರರಾಷ್ಟ್ರೀಯ ಜೋಳ ಮತ್ತು ಗೋಧಿ ತಳಿ ಅಭಿವೃದ್ಧಿ ಕೇಂದ್ರ ಮತ್ತು ಬೆಂಗಳೂರು ಕೃಷಿ ವಿ.ವಿ ಸಹಯೋಗದಲ್ಲಿ ನಿರ್ಮಿಸಲಾಗಿರುವ ಜೋಳ ತಳಿ ವಂಶವಾಹಿನಿ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಜೋಳ ಪೌಷ್ಟಿಕ ಆಹಾರವಾಗುವ ಜತೆಗೆ ಜಾನುವಾರುಗಳಿಗೆ ಮೇವು ಮತ್ತು ಜೈವಿಕ ಇಂಧನ ಉತ್ಪಾದನೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಅಮೆರಿಕದಲ್ಲಿ ಶೇ 22ರಷ್ಟು ಇಂಧನ ಜೈವಿಕ ಇಂಧನವಾಗಿದೆ. ಇದರ ಮೂಲ ಜೋಳ. ಮುಂದಿನ ದಿನಗಳಲ್ಲಿ ಭಾರತದಲ್ಲೂ ಜೈವಿಕ ಇಂಧನದ ಪ್ರಮುಖ ಮೂಲವಾಗಿ ಜೋಳ ಬೆಳಕೆಯಾಗಲಿದೆ ಎಂದರು.

ಆಹಾರ ಧಾನ್ಯಗಳು ಆಹಾರಕ್ಕೆ ಮಾತ್ರ ಸೀಮಿತವಾಗದೆ, ಜಾನುವಾರುಗಳಿಗೆ ಮೇವು, ಇಂಧನವಾಗಿ ಬಳಕೆಯಾಗುವ ವಾತಾವರಣ ಸೃಷ್ಟಿಯಾಗುತ್ತಿದೆ. ಆಹಾರ ಧಾನ್ಯವಾಗಿ ವ್ಯಾಪಕವಾಗಿ ಬಳೆಕೆಯಾಗುವ ‌ಜೋಳ ಇದರಲ್ಲಿ ಪ್ರಮುಖವಾಗಿದೆ.ಈ ನಿಟ್ಟಿನಲ್ಲಿ ಸುಧಾರಿತ ಜೋಳದ ತಳಿಗಳ ಸಂಶೋಧನೆಗೆ ಈ ಕೇಂದ್ರ ಸಹಕಾರಿಯಾಗಲಿದೆ ಎಂದು ಪರೋಡ ತಿಳಿಸಿದರು.

ಜಾಗತಿಕ ಜೋಳ ಸಂಶೋಧನೆ ಕೇಂದ್ರದ ನಿರ್ದೇಶಕ ಡಾ.ಬಿ.ಎಂ. ಪ್ರಸನ್ನ ಮಾತನಾಡಿ, ಸಂಶೋಧನಾ ಕೇಂದ್ರದ ಸ್ಥಾಪನೆಯಿಂದಾಗಿ ಕುಣಿಗಲ್ ಜಾಗತಿಕ ಮಟ್ಟದಲ್ಲಿ ಗುರುತಿಸುವಂತಾಗಿದೆ. ಜೋಳ ತಳಿ ವಂಶವಾಹಿನಿ ಸಂಶೋಧನೆ ಜಗತ್ತಿನ ಮೂರನೇ ಮತ್ತು ಏಷ್ಯಾ ಖಂಡದ ಪ್ರಥಮ ಕೇಂದ್ರವಾಗಿದೆ. ತಾಲ್ಲೂಕಿನಲ್ಲಿ ಜೋಳದ ತಳಿ ಸಂಶೋಧನೆಗೆ ಪೂರಕ ವಾತಾವರಣ ದೊರೆತ ಕಾರಣ ಸಂಶೋಧನೆ ಕೇಂದ್ರ ಸ್ಥಾಪಿಸಲಾಗಿದೆ ಎಂದ ಮಾಹಿತಿ ನೀಡಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ರಾಜೇಂದ್ರ ಪ್ರಸಾದ್, ವಿವಿಯ ನಿರ್ದೇಶಕ ಮಂಡಳಿ ಸದಸ್ಯ ಶ್ರೀರಾಮ, ಸಂಶೋಧಕ ನಿರ್ದೇಶಕ ಷಡಕ್ಷರಿ, ದಯಾನಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT