ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: 5 ಮಂದಿ ಸಾವು, 93 ಮಂದಿಗೆ ಸೋಂಕು

ಸೋಂಕಿತರ ಸಂಖ್ಯೆ 2,081ಕ್ಕೆ ಏರಿಕೆ, ಈವರೆಗೆ 1,110 ಮಂದಿ ಗುಣಮುಖ
Last Updated 4 ಆಗಸ್ಟ್ 2020, 13:07 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಮಂಗಳವಾರ 5 ಮಂದಿ ಮೃತಪಟ್ಟಿದ್ದು, 93 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಮೃತಪಟ್ಟವರಲ್ಲಿ 4 ಮಂದಿ ಪುರುಷರು ಹಾಗೂ ಒಬ್ಬರು ಮಹಿಳೆ ಇದ್ದಾರೆ. ಅದರಲ್ಲಿ 4 ಮಂದಿ ತುಮಕೂರು ತಾಲ್ಲೂಕಿನವರೇ ಇದ್ದಾರೆ. ಮೃತಪಟ್ಟ 5 ಮಂದಿಯೂ 65 ವರ್ಷ ಮೇಲ್ಪಟ್ಟವರೇ ಆಗಿದ್ದಾರೆ.

ತುಮಕೂರು ತಾಲ್ಲೂಕು ಕುಂಟರಾಮನಪಾಳ್ಯದ 70 ವರ್ಷದ ವೃದ್ಧ ಚಿಕಿತ್ಸೆಗೆ ಸ್ಪಂದಿಸದೇ ಮಂಗಳವಾರ ಮೃತಪಟ್ಟಿದ್ದಾರೆ. ತುಮಕೂರು ನಗರ ಪಿ.ಎಚ್‌.ಕಾಲೋನಿಯ 67 ವ್ಯಕ್ತಿ ಆರೋಗ್ಯ ಸಮಸ್ಯೆಯಿಂದಾಗಿ ಆ.1 ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಆ.2 ರಂದು ಮೃತಪಟ್ಟಿದ್ದಾರೆ. ಇವರ ಗಂಟಲುದ್ರವವನ್ನು ಪರೀಕ್ಷೆ ಮಾಡಿದಾಗ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ತುಮಕೂರು ವಿದ್ಯಾನಗರದ 73 ವರ್ಷದ ವೃದ್ಧೆ ಆ.3 ರಂದು ಹಾಗೂ ಸದಾಶಿವನಗರದ 69 ವರ್ಷದ ವ್ಯಕ್ತಿ ಆ.2 ರಂದು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಇನ್ನೂ ಮಧುಗಿರಿ ತಾಲ್ಲೂಕು ಕೆ.ಆರ್.ಬಡಾವಣೆಯ 70 ವರ್ಷದ ವೃದ್ಧ ಆರೋಗ್ಯ ಸಮಸ್ಯೆಯಿಂದಾಗಿ ಆ.1 ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ, ಆ.2 ರಂದು ಮೃತಪಟ್ಟಿದ್ದಾರೆ. ಇವರ ಗಂಟಲುದ್ರವವನ್ನು ಪರೀಕ್ಷೆ ಮಾಡಿದಾಗ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ತಾಲ್ಲೂಕಿನಲ್ಲಿ ಸಾವಿರದತ್ತ ಪ್ರಕರಣ: ತುಮಕೂರು ತಾಲ್ಲೂಕಿನಲ್ಲಿ ಮಂಗಳವಾರ 42 ಮಂದಿಗೆ ಸೋಂಕು ತಗುಲಿದ್ದು, ಈವರೆಗೆ ಸೋಂಕು ತಗುಲಿರುವವರ ಸಂಖ್ಯೆ 871ಕ್ಕೆ ಏರಿಕೆಯಾಗಿದೆ. ಮಂಗಳವಾರ ಜಿಲ್ಲೆಯಲ್ಲಿ 63 ಮಂದಿ ಗುಣಮುಖರಾಗಿದ್ದು, ಅವರಲ್ಲಿ 21 ಮಂದಿ ತುಮಕೂರು ತಾಲ್ಲೂಕಿನವರಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 1110 ಮಂದಿ ಗುಣಮುಖರಾಗಿದ್ದು, 908 ಮಂದಿಗೆ ಕೊರೊನಾ ಸಕ್ರಿಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT