ಬುಧವಾರ, ಆಗಸ್ಟ್ 4, 2021
20 °C

ತುರುವೇಕೆರೆ: 2 ವರ್ಷದ ಬಾಲಕನಿಗೆ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುರುವೇಕೆರೆ: ತಾಲ್ಲೂಕಿನಲ್ಲಿ 4 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

ಕೊಂಡಜ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಗೊರಾಘಟ್ಟದ 2 ವರ್ಷದ ಬಾಲಕ, ಸಂಪಿಗೆ ಹೊಸಹಳ‍್ಳಿ ಪಂಚಾಯಿತಿಯ ಕುರುಬರಹಳ್ಳಿ ಸಮೀಪದ (ಸಣ್ಣಯ್ಯನಪಾಳ್ಯ) 8 ವರ್ಷದ ಬಾಲಕ, ಶೆಟ್ಟಿಗೊಂಡನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಚಟ್ಟನಹಳ‍್ಳಿಯ 27 ವರ್ಷದ ಯುವಕನಿಗೆ ಕೊರೊನಾ ಸೋಂಕಿರುವುದು ದೃಢವಾಗಿದೆ.

ಚಟ್ಟನಹಳ‍್ಳಿಯ ಸೋಂಕಿತ ಯುವಕನನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಹಾಗೆಯೇ ಗೋಣಿತುಮಕೂರು ಪಂಚಾಯಿತಿ ವ್ಯಾಪ್ತಿಯ ನಡುವನಹಳ್ಳಿಯ 65 ವರ್ಷದ ವ್ಯಕ್ತಿಗೆ ಸೋಂಕು ಕಂಡು ಬಂದಿದ್ದು, ಸದ್ಯ ಬೆಂಗಳೂರಿನ ನಿಮಾನ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೊಡ್ಡಗೊರಾಘಟ್ಟ ಮತ್ತು ಕುರುಬರಹಳ್ಳಿ ಬಾಲಕರಿಬ್ಬರನ್ನು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೋಂಕಿತರ ಕುಟುಂಬದವರನ್ನು ಸಹ ಮನೆಯಲ್ಲಿಯೇ ಕ್ವಾರಂಟೈನ್‍ ಮಾಡಲಾಗಿದೆ. ಅವರ ಮನೆ ಮತ್ತು ರಸ್ತೆಗಳನ್ನು ಸ್ಯಾನಿಟೈಸ್‌ ಮಾಡಿ 200 ಮೀ. ದೂರದವರೆಗೆ ಸೀಲ್‍ಡೌನ್‍ ಮಾಡಲಾಗಿದೆ.

ಪಿಡಿಒ, ಗ್ರಾಮ ಲೆಕ್ಕಾಧಿಕಾರಿ, ಆಶಾ ಕಾರ್ಯಕರ್ತೆಯರು ತುರ್ತು ಸೇವೆ ನೀಡುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು