ಶನಿವಾರ, ಮೇ 8, 2021
18 °C

ಕೊರೊನಾ: ಜಾತ್ರೆ ತಡೆದ ಅಧಿಕಾರಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಣಿಗಲ್: ಕೊರೊನಾ ಎರಡನೇ ಅಲೆ ಅಬ್ಬರಿಸುತ್ತಿದ್ದರೂ, ತಾಲ್ಲೂಕಿನ ಬಿದರಿಕಟ್ಟೆ ಪಾಳ್ಯದಲ್ಲಿ ಜಾತ್ರೆ ಸಿದ್ಧತೆಯಲ್ಲಿದ್ದ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದ ಅಧಿಕಾರಿಗಳು ಜಾತ್ರೆ ತಡೆದ ಘಟನೆ ಶನಿವಾರ ನಡೆದಿದೆ.

ತಾಲ್ಲೂಕಿನ ಅಮೃತೂರು ಹೋಬಳಿಯ ಸಂಕೇನಪುರ ಬಳಿಯ ಬಿದರಿಕಟ್ಟೆ ಪಾಳ್ಯದಲ್ಲಿ ಶನಿವಾರ ಆರತಿ ಮತ್ತು ಸಾಮೂಹಿಕ ಭೋಜನಾ ವ್ಯವಸ್ಥೆಗೆ ಗ್ರಾಮಸ್ಥರು ಅಣಿಯಾಗುತ್ತಿದ್ದು, ಸುದ್ದಿ ತಿಳಿದ ಪ್ರಭಾರ ತಹಶೀಲ್ದಾರ್ ಕಲ್ಯಾಣಿ ವೆಂಕಟೇಶ್ ಕಾಂಬ್ಲಿ, ಪಿಎಸ್ಐ ವೆಂಕಟೇಶ್, ಕಂದಾಯ ಅಧಿಕಾರಿ ವಿನೋದ್ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿ, ನಿಷೇದಾಜ್ಞೆ ಜಾರಿಯಿರುವುದರಿಂದ ಹಬ್ಬದ ಆಚರಣೆಗೆ ಅವಕಾಶ ನಿರಾಕರಿಸಿದ ಕಾರಣ ಗ್ರಾಮಸ್ಥರು ತಮ್ಮಮನೆಮಟ್ಟಿಗೆ ಹಬ್ಬ ಆಚರಿಸುವುದಾಗಿ ತಿಳಿಸಿ, ಆರತಿ ಪೂಜೆ ಮತ್ತು ಸಾಮೂಹಿಕ ಭೋಜನ ವ್ಯವಸ್ಥೆ ಕೈಬಿಟ್ಟಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು