ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಜಿಲ್ಲೆಗೆ ಬರುವವರಿಗೆ ಕ್ವಾರಂಟೈನ್

ಹೊರ ಜಿಲ್ಲೆ, ರಾಜ್ಯಗಳಿಂದ ಬರುವವರ ಮೇಲೆ ತೀವ್ರ ನಿಗಾ
Last Updated 10 ಮೇ 2020, 16:44 IST
ಅಕ್ಷರ ಗಾತ್ರ

ತುಮಕೂರು: ನಗರಕ್ಕೆ ಹೊರ ಜಿಲ್ಲೆಗಳಿಂದ ಮತ್ತು ಹೊರ ರಾಜ್ಯಗಳಿಂದ ಬರುವವರ ಮೇಲೆ ತೀವ್ರ ನಿಗಾವಹಿಸಲು ಚೆಕ್‍ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ.

ನಗರ ಪ್ರವೇಶಿಸುವ ವಾಹನ, ವ್ಯಕ್ತಿಗಳನ್ನು ತಪಾಸಣೆ ಮಾಡಲಿದ್ದಾರೆ. ನಂತರ ಅವರ ಆರೋಗ್ಯ ಪರಿಸ್ಥಿತಿ ಆಧರಿಸಿ ಹೋಂ ಕ್ವಾರಂಟೈನ್ ಅಥವಾ ಸಾಂಸ್ಥಿಕ ಕ್ವಾರಂಟೈನ್‍ಗೆ ಕಳುಹಿಸುವರು.

ಬೆಂಗಳೂರು ಕಡೆಯಿಂದ ತುಮಕೂರಿಗೆ ಬರುವ ವಾಹನ ಸವಾರರು ಕ್ಯಾತ್ಸಂದ್ರ ಜಾಸ್‍ಟೋಲ್‍ಗೇಟ್‍ನಿಂದ ಗುಬ್ಬಿ ರಿಂಗ್ ರಸ್ತೆ ಮೂಲಕವೇ ಪ್ರವೇಶಿಸಬೇಕು. ಕ್ಯಾತ್ಸಂದ್ರ ಸಿ.ಎಂ. ಬಡಾವಣೆ ಕಡೆಯಿಂದ ತುಮಕೂರು ನಗರಕ್ಕೆ ಬರುವ ವಾಹನಗಳು ಸರ್ವಿಸ್ ರಸ್ತೆಯಿಂದ ಅಗ್ನಿಶಾಮಕ ಠಾಣೆ ಮೂಲಕ ಬಟವಾಡಿ ಪ್ರವೇಶಿಸಿ ತುಮಕೂರು ನಗರ ಪ್ರವೇಶಿಸಬಹುದು. ಬೆಂಗಳೂರು ಕಡೆಯಿಂದ ಗುಬ್ಬಿ–ತಿಪಟೂರು-ಚಿಕ್ಕನಾಯಕನಹಳ್ಳಿ-ಶಿವಮೊಗ್ಗ ಕಡೆಗೆ ಹೋಗುವ ವಾಹನ ಸವಾರರು ಕ್ಯಾತ್ಸಂದ್ರ ಜಾಸ್‍ಟೋಲ್‍ಗೇಟ್ ಬಳಿಯ ಗುಬ್ಬಿ ರಿಂಗ್ ರಸ್ತೆ ಮೂಲಕ ಹೋಗತಕ್ಕದ್ದು.

ಮೈಸೂರು-ಕುಣಿಗಲ್ ಕಡೆಯಿಂದ ಬರುವವರು ಕುಣಿಗಲ್ ಜಂಕ್ಷನ್ ಮೂಲಕ ತುಮಕೂರು ನಗರದ ಒಳಗಡೆ ಬರಬಹುದು. ಗುಬ್ಬಿ-ತಿಪಟೂರು-ಚಿಕ್ಕನಾಯಕನಹಳ್ಳಿ-ಶಿವಮೊಗ್ಗ ಕಡೆಯಿಂದ ತುಮಕೂರು ನಗರದ ಒಳಗಡೆ ಬರುವವರು ಗುಬ್ಬಿ ರಿಂಗ್ ರಸ್ತೆ ಜಂಕ್ಷನ್ ಮೂಲಕ ಬರಬೇಖು. ಶಿರಾ- ಚಿತ್ರದುರ್ಗ-ದಾವಣಗೆರೆ ಕಡೆಯಿಂದ ಬರುವವರು ಲಿಂಗಾಪುರ ಕೆಳಸೇತುವೆ-ಹಳೇ ಎನ್‍ಎಚ್-4 ರಸ್ತೆ ಮೂಲಕ ಶಿರಾಗೇಟ್‍ಗೆ ತಲುಪಬಹುದು ಅಥವಾ ಅಂತರಸನಹಳ್ಳಿ ಬ್ರಿಡ್ಜ್ ಸರ್ವಿಸ್ ರಸ್ತೆ ಮುಖಾಂತರ ಶಿರಾಗೇಟ್‍ ಪ್ರವೇಶಿಸಬಹುದು.

ಗುಬ್ಬಿ-ತಿಪಟೂರು-ಚಿಕ್ಕನಾಯಕ
ನಹಳ್ಳಿ-ಶಿವಮೊಗ್ಗ ಕಡೆಯಿಂದ ಬೆಂಗಳೂರು ಕಡೆಗೆ ಹೋಗುವ ವಾಹನ ಸವಾರರು ಗುಬ್ಬಿ ರಿಂಗ್ ರಸ್ತೆ ಜಂಕ್ಷನ್- ರಿಂಗ್ ರಸ್ತೆ ಮೂಲಕ ಕ್ಯಾತ್ಸಂದ್ರ ಜಾಸ್‍ಟೋಲ್‍ಗೇಟ್ ಮೂಲಕ ಹೋಗತಕ್ಕದ್ದು. ತುಮಕೂರು ನಗರದಿಂದ ಬೆಂಗಳೂರು ಕಡೆಗೆ ಹೋಗುವವರು ಬಟವಾಡಿ ಬ್ರಿಡ್ಜ್ ಮೂಲಕ ರಾಷ್ಟ್ರೀಯ ಹೆದ್ದಾರಿ-48 ರಸ್ತೆ ಮೂಲಕ ಮತ್ತು ಗುಬ್ಬಿ ರಿಂಗ್ ರಸ್ತೆ ಮೂಲಕ ಹೋಗಬಹುದಾಗಿದೆ.

ತುಮಕೂರು ನಗರದಿಂದ ಶಿರಾ ಕಡೆಗೆ ಮತ್ತು ವಸಂತನರಸಾಪುರದ ಕಡೆಗೆ ಹೋಗುವವರು ಶಿರಾಗೇಟ್ ಮೂಲಕ ಹಳೆಯ ಎನ್.ಎಚ್-4 ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿ-48 ರಸ್ತೆಯಲ್ಲಿ ತೆರಳಬಹುದು. ಅಂತರಸ
ನಹಳ್ಳಿ ಕೈಗಾರಿಕಾ ಪ್ರದೇಶ, ಕೊರಟಗೆರೆ, ಮಧುಗಿರಿ ಕಡೆಗೆ ಹೋಗುವವರು ಶಿರಾಗೇಟ್-ಅಂತರಸನಹಳ್ಳಿ ಕೆಳಸೇತುವೆ ಮೂಲಕ ಹೋಗಬಹುದು.

ರಾಷ್ಟ್ರೀಯ ಹೆದ್ದಾರಿಯಿಂದ ಬರುವವರು ಲಿಂಗಾಪುರ ಬ್ರಿಡ್ಜ್ ಮುಖಾಂತರ ಶಿರಾಗೇಟ್–ಅಂತರಸನಹಳ್ಳಿ ಬ್ರಿಡ್ಜ್ ಮುಖಾಂತರ ಶಿರಾಗೇಟ್‍ಗೆ ಹಾಗೂ ಗುಬ್ಬಿ ರಿಂಗ್ ರಸ್ತೆ ಮುಖಾಂತರ ತುಮಕೂರು ಪ್ರವೇಶಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT