ಮಂಗಳವಾರ, ಜುಲೈ 14, 2020
27 °C

ತುಮಕೂರು: ಮತ್ತಿಬ್ಬರಿಗೆ ಸೋಂಕು; ಕೋವಿಡ್‌–19 ಪ್ರಕರಣ ಏಳಕ್ಕೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಸ್ಪತ್ರೆಯಲ್ಲಿ ಸೋಂಕು ನಿವಾರಕ ಸಿಂಪಡಿಸುತ್ತಿರುವ ಸಿಬ್ಬಂದಿ– ಸಂಗ್ರಹ ಚಿತ್ರ

ತುಮಕೂರು: ಕೊರೊನಾ ಸೋಂಕಿನಿಂದ ಕೋವಿಡ್‌–19 ಕಾಯಿಲೆಯು ತುಮಕೂರು ನಗರದಲ್ಲಿ ಮತ್ತಿಬ್ಬರಲ್ಲಿ ದೃಢ‍ಪಟ್ಟಿದೆ.

ರೋಗಿ ಸಂಖ್ಯೆ 535 ಮತ್ತು 553ರ ಸಂಪರ್ಕಕ್ಕೆ ಬಂದಿದ್ದ 40 ವರ್ಷದ ಪುರಷನಿಗೆ(ಪಿ–591), 29 ವರ್ಷದ ಮಹಿಳೆಗೆ(ಪಿ–592) ಸೋಂಕು ತಗುಲಿದೆ.

ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಏಳಕ್ಕೆ ಏರಿಕೆ ಆಗಿದೆ. ಇದರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಒಬ್ಬರು ಗುಣಮುಖರಾಗಿದ್ದಾರೆ. ಉಳಿದವರನ್ನು ಜಿಲ್ಲಾಸ್ಪತ್ರೆಯ ಐಸೋಲೇಷನ್‌ ವಾರ್ಡ್‌ಗೆ ದಾಖಲು ಮಾಡಲಾಗಿದೆ.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು