ಸೋಮವಾರ, ಜುಲೈ 26, 2021
21 °C
ಸೋಂಕಿತರ ಸಂಖ್ಯೆ 252ಕ್ಕೆ ಏರಿಕೆ

ತುಮಕೂರಿನಲ್ಲಿ ಒಂದೇ ದಿನ 31 ಮಂದಿಗೆ ಕೊರೊನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕು ಮತ್ತಷ್ಟು ಪಸರಿಸುತ್ತಿದೆ. ಭಾನುವಾರ ಮತ್ತೆ 31 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 8 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 252ಕ್ಕೆ ಏರಿಕೆಯಾಗಿದೆ. 

ಭಾನುವಾರ ತುಮಕೂರು ನಗರವೊಂದರಲ್ಲೇ 12 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ತುಮಕೂರು ತಾಲ್ಲೂಕಿನ ಕಲ್ಕೆರೆಯ 48 ವರ್ಷದ ವ್ಯಕ್ತಿ, ಅಶೋಕ ನಗರದ 28 ವರ್ಷದ ಮಹಿಳೆ, ಸಿದ್ದರಾಮೇಶ್ವರ ಬಡಾವಣೆಯ 38 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ. ಸಪ್ತಗಿರಿ ಬಡಾವಣೆಯ 38 ಮತ್ತು 44 ವರ್ಷದ ವ್ಯಕ್ತಿಗಳು, ಬಡವಾಡಿಯ 40 ವರ್ಷದ ವ್ಯಕ್ತಿ, ವಿದ್ಯಾನಗರದ 31 ವರ್ಷದ ವ್ಯಕ್ತಿ, ವಿನಾಯಕನಗರದ 78 ವರ್ಷದ ವೃದ್ಧರಿಗೆ ಸೋಂಕು ತಗುಲಿದೆ.

ಜಿಲ್ಲಾ ಕಾರಾಗೃಹಕ್ಕೆ ಕರೆ ತಂದಿದ್ದ 23 ವರ್ಷದ ಅಪರಾಧಿಯೊಬ್ಬರಿಗೆ ಸೋಂಕು ತಗುಲಿದೆ. ಅವರಲ್ಲಿ ಸೋಂಕು ಇದೆ ಎನ್ನುವುದು ದೃಢವಾದ ನಂತರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ತುಮಕೂರಿನ ಮಾರುತಿನಗರದ 38 ವರ್ಷದ ಮಹಿಳೆ ಹಾಗೂ 3 ವರ್ಷದ ಹೆಣ್ಣು ಮಗು ಹಾಗೂ 10 ವರ್ಷದ ಗಂಡು ಮಗುವಿಗೆ ಸೋಂಕು ತಗುಲಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು