ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಯವಿಟ್ಟು ನಮ್ಮ ಕರೆಸಿಕೊಳ್ಳಿ: ಜರ್ಮನಿಯಲ್ಲಿರುವ ತುಮಕೂರು ವಿದ್ಯಾರ್ಥಿನಿ ಮನವಿ

ಜರ್ಮನಿಯಿಂದ ವಿದ್ಯಾರ್ಥಿನಿಯ ಮನವಿ
Last Updated 3 ಏಪ್ರಿಲ್ 2020, 12:41 IST
ಅಕ್ಷರ ಗಾತ್ರ

ತುಮಕೂರು: ಜರ್ಮನಿಯಲ್ಲಿ ವ್ಯಾಸಂಗ ಮಾಡುತ್ತಿರುವ ನಗರದ ವಿದ್ಯಾರ್ಥಿನಿ ಗೌತಮಿ, ‘ನಮ್ಮನ್ನು ತಾಯ್ನಾಡಿಗೆ ಕರೆಸಿಕೊಳ್ಳಿ’ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ವಿಡಿಯೊ ಮೂಲಕ ಮನವಿ ಮಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ನಾವು ಇಲ್ಲಿ ದುಡಿಯುವುದಕ್ಕೆ ಅಥವಾ ಕೆಲಸಕ್ಕಾಗಿ ಬಂದಿಲ್ಲ. ಓದುವುದಕ್ಕಾಗಿ ಬಂದಿದ್ದೇವೆ. ಭಾರತದ 350 ವಿದ್ಯಾರ್ಥಿಗಳು ಇದ್ದೇವೆ. ಎಲ್ಲರೂ ದೇಶಕ್ಕೆ ಮರಳು ಕಾತುರರಾಗಿ ಇದ್ದೇವೆ’ ಎಂದಿದ್ದಾರೆ.

‘ಸೋಂಕು ಹರಡುತ್ತದೆ ಎನ್ನುವ ಕಾರಣಕ್ಕೆ ನಮ್ಮನ್ನು ಬರಬೇಡಿ ಎನ್ನುತ್ತಿದ್ದಾರೆ. ನಮ್ಮ ಹಣಕಾಸಿನ ಸ್ಥಿತಿ ಕಠಿಣವಾಗಿದೆ. ನನಗೆ ಕಿಡ್ನಿಯಲ್ಲಿ ಕಲ್ಲಿದೆ. ಸ್ನೇಹಿತನೊಬ್ಬನ ಕಾಲು ಮುರಿದಿದೆ. ನಮ್ಮನ್ನು ನೋಡಿಕೊಳ್ಳಲು ಯಾರೂ ಇಲ್ಲ’ ಎಂದು ಸಮಸ್ಯೆ ಹೇಳಿಕೊಂಡಿದ್ದಾರೆ.

ಇಲ್ಲಿನ ಆಸ್ಪತ್ರೆಗಳಲ್ಲಿ ತುರ್ತು ಇರುವವರಿಗೆ ಮಾತ್ರ ಚಿಕಿತ್ಸೆ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ. ಕೇಂದ್ರ ಮತ್ತು ಕರ್ನಾಟಕ ಸರ್ಕಾರ ನಮ್ಮನ್ನು ಕರೆತರಲು ಒಂದು ವಿಮಾನ ಕಳುಹಿಸಬೇಕು ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT