ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾನದ ನೆಪದಲ್ಲಿ ವ್ಯಾಪಾರ; ಬೇಕರಿ ಬಾಗಿಲು ಮುಚ್ಚಿಸಿದ ಪೊಲೀಸರು

Last Updated 7 ಏಪ್ರಿಲ್ 2020, 12:14 IST
ಅಕ್ಷರ ಗಾತ್ರ

ಕುಣಿಗಲ್: ಕೊರೊನಾ ಲಾಕ್‌ಡೌನ್ ಸಮಯದಲ್ಲಿ ನಿರಾಶ್ರಿತರಿಗೆ ಬೇಕರಿ ಪದಾರ್ಥಗಳನ್ನು ದಾನವಾಗಿ ನೀಡುವ ನೆಪದಲ್ಲಿ ವ್ಯಾಪಾರ ನಡೆಸುತ್ತಿದ್ದ ಮಾಲೀಕನಿಗೆ ಪೊಲೀಸರು ಎಚ್ಚರಿಕೆ ನೀಡಿ ಬೇಕರಿ ಬಂದ್ ಮಾಡಿಸಿದ್ದಾರೆ.

ಪಟ್ಟಣದ ಹಕೀಂಷಾ ವಾಲಿ ವಾಣಿಜ್ಯಸಂಕೀರ್ಣದಲ್ಲಿ ಬೇಕರಿ ಮಾಲೀಕ ಪುನೀತ್, ನಿರಾಶ್ರಿತರಿಗೆ ದಾನ ಮಾಡುವ ನೆಪದಲ್ಲಿ ಬೇಕರಿ ತೆಗೆದು ವಾರದಿಂದಲೂ ವ್ಯಾಪಾರ ಮಾಡುತ್ತಿದ್ದರು. ಈ ಬಗ್ಗೆ ಬೇರೆ ಬೇಕರಿ ಮಾಲೀಕರು ಪ್ರಶ್ನಿಸಿದಾಗ, ಪೊಲೀಸರಿಂದ ಅನುಮತಿ ಪಡೆದಿರುವುದಾಗಿ ತಿಳಿಸುತ್ತಿದ್ದರು. ಈ ಬಗ್ಗೆ ಜೆಡಿಎಸ್ ಮುಖಂಡರ ತಂಡ ತಹಶೀಲ್ದಾರ್‌ಗೆ ದೂರು ನೀಡಿದ್ದರು.

ಸೋಮವಾರ ರಾತ್ರಿ ತಹಶೀಲ್ದಾರ್ ವಿಶ್ವನಾಥ್ ಭೇಟಿ ನೀಡಿ ವಿಚಾರಣೆ ನಡೆಸಿ, ಬೇಕರಿ ಬಂದ್ ಮಾಡಲು ಸೂಚನೆ ನೀಡಿದ್ದರೂ, ಪರಿಪಾಲನೆ ಮಾಡದೆ ಮಂಗಳವಾರವೂ ಎಂದಿನಂತೆ ವ್ಯಾಪಾರ ಮಾಡುತ್ತಿದ್ದರು.

ನಂತರ ಡಿವೈಎಸ್ಪಿ ಜಗದೀಶ್ ಸೂಚನೆ ಮೇರೆಗೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿದಾಗ, ಮಾಲೀಕ ಪುನೀತ್ ವಾಗ್ವಾದ ನಡೆಸಿದರು. ಪೊಲೀಸರು ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದ ಬಳಿಕ ಬೇಕರಿ ಮುಚ್ಚಿದರು. ದಾಖಲೆಗಳ ಪರಿಶೀಲನೆಗೆ ಮಾಲೀಕನನ್ನು ಠಾಣೆಗೆ ಕರೆದೊಯ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT