ಭ್ರಷ್ಟಾಚಾರ ತಡೆಗೆ ಯುವಜನರು ಮುಂದಾಗಿ

7
ಸ್ವಾತಂತ್ರ್ಯ ದಿನಾಚರಣೆಯ ನೆನಪು ಕಾರ್ಯಕ್ರಮದಲ್ಲಿ ಡಿ.ಎನ್.ಸಂಪತ್ ಹೇಳಿಕೆ

ಭ್ರಷ್ಟಾಚಾರ ತಡೆಗೆ ಯುವಜನರು ಮುಂದಾಗಿ

Published:
Updated:
Deccan Herald

ತುಮಕೂರು: ದೇಶದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಯುವಜನರು ಇದರ ವಿರುದ್ಧ ಹೋರಾಡಬೇಕು ಎಂದು ತುಮಕೂರು ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ಡಿ.ಎನ್.ಸಂಪತ್ ಆಶಯ ವ್ಯಕ್ತಪಡಿಸಿದರು.

ನಗರದ ವೀರಸೌಧದಲ್ಲಿ ಭಾನುವಾರ ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸಂಘ ಆಯೋಜಿಸಿದ್ದ 72ನೇ ಸ್ವಾತಂತ್ರ್ಯ ದಿನಾಚರಣೆಯ ನೆನಪು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಹಲವು ಸ್ವಾತಂತ್ರ್ಯ ಹೋರಾಟಗಾರರು ಸಾವನ್ನಪ್ಪಿದ್ದರೂ ಅವರ ಹೆಸರಿನಲ್ಲಿ ಪಿಂಚಣಿಗಾಗಿ ಕೆಲವರು ಜೀವಂತ ಪಟ್ಟಿಯಲ್ಲಿ ಇದ್ದಾರೆ’ ಎಂದರು.

‘ಯುವಜನರು ಜಾತಿ ಭೇದವನ್ನು ಬಿಟ್ಟು ದೇಶಕ್ಕಾಗಿ ಕೊಡುಗೆ ನೀಡಬೇಕು. ಈ ದೇಶದ ರಕ್ಷಣೆ ಯುವಕರ ಜವಾಬ್ದಾರಿಯಾಗಿದೆ’ ಎಂದು ಸಲಹೆ ನೀಡಿದರು.

ವೃಕ್ಷಮಿತ್ರ ಸಂಸ್ಥೆಯ ಪ್ರೊ.ಕೆ.ಸಿದ್ದಪ್ಪ ಮಾತನಾಡಿ, ‘ಇಂದು ಪ್ರಕೃತಿ ಅಸಮತೋಲನದ ಪರಿಣಾಮವಾಗಿ ಕೇರಳ ಭಗ್ನವಾಗಿದೆ. ಮಾನವನು ಪರಿಸರವನ್ನು ಹೀಗೆ ನಾಶ ಮಾಡಿದರೆ ಕರ್ನಾಟಕದಲ್ಲಿ ಪೂರ್ಣವಾಗಿ ಪ್ರಕೃತಿ ವಿಕೋಪ ಸಂಭವಿಸುವ ಸಾಧ್ಯತೆ ಇದೆ’ ಎಂದು ಎಚ್ಚರಿಕೆ ನೀಡಿದರು.

ಡಾ.ರೂಪಶ್ರೀ ಮಾತನಾಡಿ, ‘ಭಾರತವು ಅಭಿವೃದ್ಧಿಶೀಲ ರಾಷ್ಟ್ರವಾಗಿದೆ. ಆದರೆ ಅಮೇರಿಕಾದಂತ ಅಭಿವೃದ್ಧಿ ಹೊಂದಿದ ರಾಷ್ಟ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಶೇ 25 ರಷ್ಟು ಜನರು ಭಾರತೀಯರಾಗಿರುವುದು ದುರದೃಷ್ಟಕರ’ ಎಂದು ಬೇಸರ ವ್ಯಕ್ತಪಡಿಸಿದರು.

 ‘ಮೈಕ್ರೋಸಾಫ್ಟ್, ಐಬಿಎಂ ಸೇರಿದಂತೆ ಪ್ರತಿಷ್ಠಿತ ಕಂಪನಿಗಳಲ್ಲಿ ಶೇ 18 ರಷ್ಟು ಭಾರತೀಯರು ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿ ಹುಟ್ಟಿ ಬೆಳೆದು ಹಣಕ್ಕಾಗಿ ಪರದೇಶಕ್ಕೆ ಹೋಗುತ್ತಿರುವುದು ಶೋಚನೀಯ’ ಎಂದರು.

ಸ್ವಾತಂತ್ರ್ಯ ಹೋರಾಟಗಾರರಾದ ಟಿ.ಆರ್.ರೇವಣ್ಣ, ಕೆ.ಸಿ.ಹೊನ್ನಪ್ಪ, ಕೆ.ಆರ್.ಎಂ.ಸುದರ್ಶನ್, ಚನ್ನಮಲ್ಲೇಗೌಡ, ನಿವೃತ್ತ ಯೋಧರಾದ ಜೆ.ಎಸ್.ಈಶ್ವರಪ್ಪ, ಎನ್.ಸಂಜೀವಪ್ಪ, ಸಾಹಿತಿ ಎಂ.ಸಿ.ಲಲಿತಾ, ಬಸವರಾಜು ಹಾಗೂ ಸ್ವಾತಂತ್ರ್ಯ ಯೋಧರು ಇದ್ದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !