ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಸಕರ ವೈಫಲ್ಯ; ಹೆಚ್ಚಿದ ಭ್ರಷ್ಟಾಚಾರ: ಚಿದಾನಂದ ಎಂ.ಗೌಡ ಆರೋಪ

Published : 31 ಆಗಸ್ಟ್ 2024, 14:42 IST
Last Updated : 31 ಆಗಸ್ಟ್ 2024, 14:42 IST
ಫಾಲೋ ಮಾಡಿ
Comments

ಶಿರಾ: ‘ಕ್ಷೇತ್ರದಲ್ಲಿ ಶಾಸಕರ ವೈಪಲ್ಯದಿಂದಾಗಿ ಆಡಳಿತ ಯಂತ್ರ ಕುಸಿದಿದ್ದು ಎಲ್ಲಿ ನೋಡಿದರು ಭ್ರಷ್ಟಾಚಾರ ಹೆಚ್ಚಿದೆ. ಇದಕ್ಕೆ ಶಾಸಕರ ವೈಫಲ್ಯವೇ ಕಾರಣ. ಇದು ತಮ್ಮ ಕೊನೆಯ ಅವಧಿ ಎಂದು ಶಾಸಕರು ಕೈಚೆಲ್ಲಿ ಕುಳಿತಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಆರೋಪಿಸಿದರು.

ನಗರದಲ್ಲಿ ಶನಿವಾರ ಬಿಜೆಪಿ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನದಲ್ಲಿ ಅವರು ಮಾತನಾಡಿದರು.

ಕ್ಷೇತ್ರದಲ್ಲಿ ಹಣ ನೀಡದೆ ಯಾವುದೇ ಕೆಲಸವಾಗುತ್ತಿಲ್ಲ, ಅಧಿಕಾರಿಗಳನ್ನು ಪ್ರಶ್ನಿಸಬೇಕಿದ್ದ ಶಾಸಕ ಟಿ.ಬಿ.ಜಯಚಂದ್ರ ಅವರು ಈ ಬಗ್ಗೆ ಮೌನವಾಗಿದ್ದಾರೆ. ಇದರ ವಿರುದ್ಧ ಬೀದಿಗೆ ಇಳಿದು ಹೋರಾಟ ನಡೆಸುವ ದಿನಗಳು ದೂರವಿಲ್ಲ ಎಂದರು.

ಪ್ರತಿ ಬೂತ್‌ನಲ್ಲಿ ಪಕ್ಷದ ಕಾರ್ಯಕರ್ತರು ಸಂಘಟಿತರಾಗಿ ಸದಸ್ಯತ್ವ ಅಭಿಯಾನ ನಡೆಸಿ ಪಕ್ಷವನ್ನು ಸಂಘಟಿಸಬೇಕು. ಮುಂದಿನ ಬಾರಿ ಶಿರಾದಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗುವಂತೆ ಕೆಲಸ ಮಾಡಬೇಕು ಎಂದರು.

ನಾರು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಬಿ.ಕೆ.ಮಂಜುನಾಥ್ ಮಾತನಾಡಿ, ಪಕ್ಷ ಸದೃಢವಾದರೆ ಎಲ್ಲರಿಗೂ ಅಧಿಕಾರ ದೊರೆಯುವುದು. ಮುಂದಿನ ದಿನಗಳಲ್ಲಿ ನಡೆಯಲಿರುವ ತಾ.ಪಂ ಮತ್ತು ಜಿ.ಪಂ ಚುನಾವಣೆಯಲ್ಲಿ ಪಕ್ಷ ಅಧಿಕಾರ ಹಿಡಿಯುವಂತೆ ಮಾಡಬೇಕು ಎಂದರು‌.

ಬಿಜೆಪಿ ಮಹಿಳಾ ಮೋರ್ಚ ಜಿಲ್ಲಾಧ್ಯಕ್ಷೆ ಉಮಾ ವಿಜಯರಾಜ್, ತಾಲ್ಲೂಕು ಅಧ್ಯಕ್ಷರಾದ ಚಿಕ್ಕಣ್ಣ, ಗಿರಿಧರ್, ಕದಿರೇಹಳ್ಳಿ ಮೂರ್ತಿ, ಸಂತೆಪೇಟೆ ನಟರಾಜ್, ಮುದಿಮುಡು ಮಂಜುನಾಥ್, ಮದ್ದೇವಳ್ಳಿ ರಾಮಕೃಷ್ಣ, ಬಸವರಾಜು, ರಂಗಸ್ವಾಮಿ, ನಗರಸಭೆ ಸದಸ್ಯರಾದ ರಂಗರಾಜು, ಅಂಬುಜಾಕ್ಷಿ ನಟರಾಜ್, ಎಂಜಲಗೆರೆ ಮೂರ್ತಿ, ಶ್ರೀನಿವಾಸ್, ಲಲಿತಮ್ಮ, ಲತಾಕೃಷ್ಣ ಹಾಜರಿದ್ದರು.

ಶಿರಾದಲ್ಲಿ ಶನಿವಾರ ಬಿಜೆಪಿ ಪಕ್ಷದಿಂದ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಮಾತನಾಡಿದರು. ನಾರು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಬಿ.ಕೆ.ಮಂಜುನಾಥ್ ಇದ್ದರು.
ಶಿರಾದಲ್ಲಿ ಶನಿವಾರ ಬಿಜೆಪಿ ಪಕ್ಷದಿಂದ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಮಾತನಾಡಿದರು. ನಾರು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಬಿ.ಕೆ.ಮಂಜುನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT