ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

17,227 ಮತ ಪಡೆದ ಸಿಪಿಐ ಅಭ್ಯರ್ಥಿ

Last Updated 24 ಮೇ 2019, 20:24 IST
ಅಕ್ಷರ ಗಾತ್ರ

ತುಮಕೂರು: ಲೋಕಸಭಾ ಚುನಾವಣೆಯಲ್ಲಿ ಸಿಪಿಐ ಅಭ್ಯರ್ಥಿ ಎನ್.ಶಿವಣ್ಣ ಅವರು 17227 (ಶೇ1.38) ಮತಗಳನ್ನು ಗಳಿಸಿದ್ದಾರೆ. ಕಣದಲ್ಲಿದ್ದ ಗರಿಷ್ಠ ಮತಗಳನ್ನು ಗಳಿಸಿದ ಮೂವರಲ್ಲಿ ಎನ್.ಶಿವಣ್ಣ ಅವರೂ ಒಬ್ಬರು.

ಜಿ.ಎಸ್. ಬಸವರಾಜ್ ಅವರ ಗೆಲುವಿನ ಅಂತರ 13339 ಇದ್ದರೆ ಅದಕ್ಕಿಂತ 4 ಸಾವಿರ ಮತಗಳು ಶಿವಣ್ಣ ಅವರಿಗೆ ಲಭಿಸಿವೆ. ಸಿಪಿಐನ ಮತಗಳು ಕಾಂಗ್ರೆಸ್, ಜೆಡಿಎಸ್ ಪಕ್ಷದ ಹತ್ತಿರದ ಮತಗಳೇ. ಮೈತ್ರಿ ಅಭ್ಯರ್ಥಿಗೆ ಹೋಗಬೇಕಾದ ಮತಗಳನ್ನು ಶಿವಣ್ಣ ಪಡೆದಿದ್ದಾರೆ. ಇಲ್ಲೂ ಮೈತ್ರಿ ನಾಯಕರು ಮುಗ್ಗರಿಸಿದ್ದಾರೆ ಎಂದು ಜೆಡಿಎಸ್ ಮತ್ತು ಕಾಂಗ್ರೆಸ್ ಪಾಳಯದ ಮುಖಂಡರು ವಿಶ್ಲೇಷಿಸುತ್ತಿದ್ದಾರೆ.

ಅಷ್ಟೇ ಅಲ್ಲ. 10,295 ನೋಟಾ ಮತಗಳು ಬಿದ್ದಿದ್ದು, ಇಲ್ಲೂ ಕೂಡಾ ಮತದಾರರ ಸೆಳೆಯುವಲ್ಲಿ ಅಭ್ಯರ್ಥಿಗಳು ವಿಫಲರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT