ಬುಧವಾರ, ಮಾರ್ಚ್ 3, 2021
19 °C

ಬೂಟುಗಾಲಿನಿಂದ ಒದ್ದ ಸಿಪಿಐ: ವಿಡಿಯೊ ವೈರಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಧುಗಿರಿ: ಪಟ್ಟಣದ ನೃಪತುಂಗ ವೃತ್ತದಲ್ಲಿ ಭಾನುವಾರ ದ್ವಿಚಕ್ರ ವಾಹನ ಸವಾರರೊಬ್ಬರನ್ನು ಪೊಲೀಸ್‌ ಅಧಿಕಾರಿಯೊಬ್ಬರು ಬೂಟು ಕಾಲಿನಿಂದ ಒದ್ದಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಪಟ್ಟಣದ ನೃಪತುಂಗ ವೃತ್ತದಲ್ಲಿ ಸಿಪಿಐ ಎಂ.ಎಸ್.ಸರ್ದಾರ್ ಅವರು ದ್ವಿಚಕ್ರ ವಾಹನ ಸವಾರರ ಡಿ.ಎಲ್. ಹಾಗೂ ಮಾಸ್ಕ್ ಪರಿಶೀಲಿಸುತ್ತಿದ್ದಾಗ ಈ ಘಟನೆ ನಡೆದಿದೆ. ಸಿಪಿಐ ಕಾಲಿನಿಂದ ಒದ್ದ ತಕ್ಷಣ ವಾಹನ ಸವಾರ ನೆಲಕ್ಕೆ ಬಿದ್ದಿರುವ ದೃಶ್ಯ ವಿಡಿಯೊದಲ್ಲಿದೆ. ಸಿಪಿಐ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.