ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ಡಿ. 29ರಂದು ಸಿಪಿಎಂ ರಾಜ್ಯ ಸಮ್ಮೇಳನ

Published 3 ಸೆಪ್ಟೆಂಬರ್ 2024, 2:30 IST
Last Updated 3 ಸೆಪ್ಟೆಂಬರ್ 2024, 2:30 IST
ಅಕ್ಷರ ಗಾತ್ರ

ತುಮಕೂರು: ಭಾರತ ಕಮ್ಯೂನಿಸ್ಟ್‌ ಪಕ್ಷದ (ಸಿಪಿಎಂ) 24ನೇ ರಾಜ್ಯ ಸಮ್ಮೇಳನ ಡಿ. 29ರಿಂದ 31ರ ವರೆಗೆ ಜಿಲ್ಲೆಯಲ್ಲಿ ನಡೆಯಲಿದ್ದು, ಇದರ ಭಾಗವಾಗಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಸ್ವಾಗತ ಸಮಿತಿ ರಚಿಸಲಾಯಿತು.

ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ.ಸಿ.ಬಯ್ಯಾರೆಡ್ಡಿ ಮಾತನಾಡಿ, ‘ಸರ್ಕಾರ ಜಿಂದಾಲ್‌ ಸ್ಟೀಲ್‌ ಕಂಪನಿಗೆ 3,667 ಎಕರೆ ಜಮೀನು ಮಾರಾಟ ಮಾಡುವ ನಿರ್ಣಯ ವಾಪಸ್‌ ಪಡೆಯಬೇಕು. ದೀರ್ಘಕಾಲದಿಂದ ಇತ್ಯರ್ಥವಾಗದೆ ಇರುವ ಬಗರ್‌ ಹುಕುಂ ಸಾಗುವಳಿದಾರರ ಭವಿಷ್ಯದ ಕುರಿತು ಚರ್ಚಿಸಿ ರೈತರ ಪರ ನಿಲ್ಲಬೇಕು’ ಎಂದು ಒತ್ತಾಯಿಸಿದರು.

ರಾಷ್ಟ್ರದಲ್ಲಿ ಸಾಂವಿಧಾನಿಕ ಮೌಲ್ಯಗಳು ತೀವ್ರ ದಾಳಿಗೆ ಒಳಗಾಗಿವೆ. ಸಂಸದೀಯ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲಾಗುತ್ತಿದೆ. ಕೋಮುವಾದದ ಕರಾಳ ಛಾಯೆ ಆವರಿಸುತ್ತಿದೆ. ಸರ್ಕಾರಗಳು ಜನರ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ ಎಂದು ಆರೋಪಿಸಿದರು.

ಚಿಂತಕ ಕೆ.ದೊರೈರಾಜ್‌, ‘ಶ್ರಮಿಕರ, ದಲಿತರ, ಮಹಿಳೆಯರ, ಸಾಮಾನ್ಯರ ಹಕ್ಕುಗಳಿಗೆ ಹೋರಾಟ ನಡೆಸಬೇಕು. ಶ್ರಮ ಸಂಸ್ಕೃತಿ ಮೂಲಕವೇ ಸಮ ಸಂಸ್ಕೃತಿಯತ್ತ ಸಾಗಬೇಕು’ ಎಂದು ಹೇಳಿದರು.

ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸೈಯದ್‌ ಮುಜೀಬ್‌, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಬಿ.ಉಮೇಶ್‌, ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ವಿವಿಧ ಸಂಘಟನೆಗಳ ಮುಖಂಡರಾದ ಪಂಡಿತ್‌ ಜವಾಹರ್‌, ರವೀಂದ್ರ ನಾಯಕ್, ಎನ್.ಎ.ಖಾನ್, ಅಪ್ಸರ್‌ಖಾನ್, ಆರ್.ಎಸ್.ಚನ್ನಬಸಣ್ಣ, ಎ.ಅಜ್ಜಪ್ಪ, ದೊಡ್ಡನಂಜಪ್ಪ, ರಾಜಮ್ಮ, ನರಸಿಂಹಮೂರ್ತಿ, ಲೋಕೇಶ್, ಕುಮಾರ್, ಪ್ರಕಾಶ್, ಶಿವಕುಮಾರ್‌, ಜಿ.ಕಮಲ, ಟಿ.ಆರ್ ಕಲ್ಪನಾ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT