ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರು ಪೊಲೀಸರ ವಶಕ್ಕೆ

5

ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರು ಪೊಲೀಸರ ವಶಕ್ಕೆ

Published:
Updated:

ಶಿರಾ: ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುವನ್ನು ಇಲ್ಲಿನ ಯುವಕರು ರಕ್ಷಿಸಿ ಪೊಲೀಸರ ವಶಕ್ಕೆ ನೀಡಿದ್ದಾರೆ.

ಆಂಧ್ರಪ್ರದೇಶದ ತಾಡಪತ್ರಿ ತಾಲ್ಲೂಕಿನ ರಾಮರಾಜಪಲ್ಲೆ ಗ್ರಾಮದ ವಲ್ಲಿ ಎನ್ನುವ ವ್ಯಕ್ತಿ ಭಾನುವಾರ ಸಂಜೆ ಸರಕು ಸಾಗಾಣಿಕೆ ವಾಹನದಲ್ಲಿ ಬುಕ್ಕಾಪಟ್ಟಣ ಕಡೆಯಿಂದ ದನಗಳನ್ನು ತುಂಬಿಕೊಂಡು ಬರುತ್ತಿದ್ದ. ರಿಲೆಯನ್ಸ್ ಪೆಟ್ರೋಲ್ ಬಂಕ್ ಸಮೀಪ ರಘುನಂದನ್ ಹಾಗೂ ಗುರುಪ್ರಸಾದ್ ಎಂಬುವವರು ತಡೆದ ಈ ಬಗ್ಗೆ ಪ್ರಶ್ನಿಸಿದ್ದಾರೆ. ಚಾಲಕ ನೀಡಿದ ಉತ್ತರದಿಂದ ಅನುಮಾನಗೊಂಡು ಪೊಲೀಸರ ವಶಕ್ಕೆ ನೀಡಿದ್ದಾರೆ.

ರಾಸುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿರಬೇಕು ಎಂದು ರಘುನಂದನ್ ಶಿರಾ ನಗರ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ.

ಜನಸ್ತೋಮ: ಪೊಲೀಸ್ ಠಾಣೆಗೆ ಜಾನುವಾರು ಕೊಂಡೊಯ್ದ ವಿಷಯ ತಿಳಿದು ಜನರು ಠಾಣೆ ಮುಂದೆ ಜಮಾಯಿಸಿದ್ದರು. ಪರ ಮತ್ತು ವಿರೋಧ ಗುಂಪುಗಳ ನಡುವೆ ಮಾತಿನ ಚಕಮುಕಿ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಪೊಲೀಸರು ಜನರನ್ನು ಚದುರಿಸಿದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !