ಹಣ ದ್ವಿಗುಣ: ₹ 15 ಲಕ್ಷ ಕಳೆದುಕೊಂಡ ಬ್ಯಾಂಕ್ ವ್ಯವಸ್ಥಾಪಕ

7

ಹಣ ದ್ವಿಗುಣ: ₹ 15 ಲಕ್ಷ ಕಳೆದುಕೊಂಡ ಬ್ಯಾಂಕ್ ವ್ಯವಸ್ಥಾಪಕ

Published:
Updated:

ಕುಣಿಗಲ್: ಹಣ ದ್ವಿಗುಣದ (ಮನಿ ಡಬ್ಲಿಂಗ್) ಆಸೆಗೆ ಬಿದ್ದ ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿರುವ ಇಂಡಸ್ ಇಂಡ್ ಬ್ಯಾಂಕ್ ವ್ಯವಸ್ಥಾಪಕ ಬಿ.ಎಂ.ನಾಣಯ್ಯ ₹ 15 ಲಕ್ಷ ಕಳೆದುಕೊಂಡಿದ್ದಾರೆ.

ಅವರ ಸಹೋದ್ಯೋಗಿ ಸುಬ್ರಹ್ಮಣ್ಯ ಸ್ನೇಹಿತರಾದ ದಿಲೀಪ್, ರಾಜೇಗೌಡ ಮತ್ತು ಗೌತಮ್ ಹಣ ದ್ವಿಗುಣಗೊಳಿಸಿ ಕೊಡುತ್ತೇವೆ ಎಂದು ನಾಣಯ್ಯ ಅವರನ್ನು ನಂಬಿಸಿದ್ದಾರೆ. ಮನೆ ಕಟ್ಟಿಸುವ ಸಲುವಾಗಿ ಇಟ್ಟುಕೊಂಡಿದ್ದ ಹಣವನ್ನು ಆ.4ರಂದು ತೆಗೆದುಕೊಂಡು ಹೋಗಿ ತಾಲ್ಲೂಕಿನ  ಜಲಧಿಗೆರೆ ಶಿವ ದೇವಸ್ಥಾನದ ಬಳಿ ಗೌತಮ್ ಮತ್ತು ರಾಜೇಗೌಡ ಅವರಿಗೆ ನೀಡಿದ್ದಾರೆ. ‘ಇಲ್ಲಿಯೇ ನಿಲ್ಲಿ ಸ್ವಲ್ಪ ಸಮಯದ ನಂತರ ಎರಡರಷ್ಟು ಹಣ ಕೊಡುತ್ತೇವೆ’ ಎಂದು ಹೇಳಿ ವಂಚಕರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ನಾಣಯ್ಯ ಅಮೃತೂರು ಪೊಲೀಸರಿಗೆ ದೂರು ನೀಡಿದ್ದಾರೆ. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !