ನಕಲಿ ಮದ್ಯ ಮಾರಾಟ: ಐವರ ಬಂಧನ

7

ನಕಲಿ ಮದ್ಯ ಮಾರಾಟ: ಐವರ ಬಂಧನ

Published:
Updated:

ತುಮಕೂರು: ಶಿರಾ ತಾಲ್ಲೂಕು ಕಲ್ಲುಕೋಟೆ ಗ್ರಾಮದ ಎಚ್.ಪಿ.ಪೆಟ್ರೋಲ್ ಬಂಕ್ ಪಕ್ಕದಲ್ಲಿ ಇತ್ತೀಚೆಗೆ ಎರಡು ಟ್ಯಾಂಕರ್‌ಗಳಿಂದ ಮದ್ಯಸಾರವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 5 ಮಂದಿ ಆರೋಪಿಗಳನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ ₹ 92 ಸಾವಿರ ಮೌಲ್ಯದ 48 ಲೀಟರ್ ಮದ್ಯಸಾರ ಹಾಗೂ 2 ಟ್ಯಾಂಕರ್‌ ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಉಪ ಆಯುಕ್ತ ಜೆ.ಗಿರಿ ಇವರ ಮಾರ್ಗದರ್ಶನದಲ್ಲಿ ತಿಪಟೂರು ವಿಭಾಗದ ಅಬಕಾರಿ ಉಪ ಅಧೀಕ್ಷಕ ಎಂ. ರಂಗಪ್ಪ, ಅಬಕಾರಿ ನಿರೀಕ್ಷಕ ಎ.ಕೆ.ನವೀನ್  ಕಾರ್ಯಾಚರಣೆ ನಡೆಸಿದ್ದರು.

ತಿಪಟೂರು ‌ಹೊರ ವಲಯದಲ್ಲಿ ಅಣ್ಣಾಪುರ ಗೇಟ್‌ನಲ್ಲಿ 2018ರ ಡಿಸೆಂಬರ್‌ 29ರಂದು ಟಾಟಾ ಸುಮೋ ಮತ್ತು 25 ರಟ್ಟಿನ ಪೆಟ್ಟಿಗೆಯಲ್ಲಿದ್ದ ಅಕ್ರಮ ನಕಲಿ ಮದ್ಯವನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣದ ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ಕಲ್ಲುಕೋಟೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !