ಸೋಮವಾರ, ನವೆಂಬರ್ 18, 2019
°C

ಮಟ್ಕಾ: ಆರೋಪಿ ಬಂಧನ

Published:
Updated:

ತುಮಕೂರು: ಇಲ್ಲಿನ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಎಸ್.ಆರ್.ಎಸ್ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಅಂಕಿ ಸಂಖ್ಯೆಗಳ ಆಧಾರದ ಮೇರೆಗೆ ಹೇಳುತ್ತ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಖಾಜಾ ಮದೀನ್ ಎಂಬಾತನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಆರೋಪಿ ₹ 10ಕ್ಕೆ ₹ 70 ನೀಡುವೆ ಎಂದು ಮಟ್ಕಾದಲ್ಲಿ ತೊಡಗಿದ್ದ. ಈತನಿಂದ ₹ 70,930 ಹಾಗೂ ಮಟ್ಕಾ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇನ್‌ಸ್ಪೆಕ್ಟರ್ ಶೇಷಾದ್ರಿ, ಸಿಬ್ಬಂದಿ ಶಿವಶಂಕರಪ್ಪ, ಅಯೂಬ್ ಜಾನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)