ಗುರುವಾರ , ನವೆಂಬರ್ 14, 2019
19 °C

ಹೇಮಾವತಿ ನಾಲೆಯಲ್ಲಿ ಮಹಿಳೆ ಶವ; ಮೂವರ ಬಂಧನ

Published:
Updated:
Prajavani

ತುಮಕೂರು: ತುರುವೇಕೆರೆ ತಾಲ್ಲೂಕಿನ ಹುಲಿಕಲ್ ಬಳಿಯ ಹೇಮಾವತಿ ನಾಲೆಯಲ್ಲಿ ಅ.1ರಂದು ಮಹಿಳೆಯ ಶವ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ದೇವನಹಳ್ಳಿ ತಾಲ್ಲೂಕಿನ ವಿಜಯಪುರದ ಲೋಕೇಶ್ ಕುಮಾರ್, ಬೆಂಗಳೂರಿನ ನಿಂಗಪ್ಪ, ನೊಣವಿನಕೆರೆಯ ಬಳಿಯ ಜೆ.ಮಲ್ಲೇನಹಳ್ಳಿ ನಾಗೇಶ್ ಬಂಧಿತರು. ಆರೋಪಿಗಳಿಂದ ದ್ವಿಚಕ್ರ ವಾಹನ, ಕಾರು, ಎರಡು ಬಂಗಾರದ ಬಳೆಗಳು ಮತ್ತು ಎರಡು ಉಂಗುರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಅಂದಾಜು ಬೆಲೆ ₹ 2 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ. 

ಡಿವೈಎಸ್‌ಪಿ ರಾಮಲಿಂಗೇಗೌಡ ನೇತೃತ್ವದಲ್ಲಿ ತನಿಖೆ ನಡೆದಿತ್ತು. ತುರುವೇಕೆರೆ ಸಿಪಿಐ ಲೋಕೇಶ್, ಎಎಸ್‌ಐ ಶಿವಲಿಂಗಪ್ಪ. ಸಿಬ್ಬಂದಿ ಎಂ.ಎಸ್.ರಮೇಶ್, ಕೇಶವಮೂರ್ತಿ, ಗಜೇಂದ್ರಕುಮಾರ್, ಮಧುಸೂದನ್, ಸಿ.ಆರ್.ಸತೀಶ್, ವೈ.ಎಸ್.ಸುಪ್ರಿತ್, ಮುತ್ತಣ್ಣ ಗುಡ್ನಾಳ್, ಕುಮಾರ್ ಕಾರ್ಯಾಚರಣೆಯ ತಂಡದಲ್ಲಿ ಇದ್ದರು.

ಪ್ರತಿಕ್ರಿಯಿಸಿ (+)