ಅಕ್ರಮ ಸಂಬಂಧ; ಪತ್ನಿ, ಸ್ನೇಹಿತನಿಗೆ ಚೂರಿ ಇರಿತ

7

ಅಕ್ರಮ ಸಂಬಂಧ; ಪತ್ನಿ, ಸ್ನೇಹಿತನಿಗೆ ಚೂರಿ ಇರಿತ

Published:
Updated:

ತುಮಕೂರು: ನಗರದ ಉಪ್ಪಾರಹಳ್ಳಿ ಬಡಾವಣೆಯಲ್ಲಿ ಸ್ನೇಹಿತನೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ ಪತ್ನಿ ಮತ್ತು ಸ್ನೇಹಿತನಿಗೆ ರಾಜಾರಾಂ ಎಂಬ ವ್ಯಕ್ತಿ ಮಂಗಳವಾರ ರಾತ್ರಿ ಚೂರಿ ಇರಿದಿದ್ದಾನೆ.

ಚೂರಿ ಇರಿತದಲ್ಲಿ ಗಾಯಗೊಂಡವರು ನಯಾಜ್ ಮತ್ತು ಅನು. ಗಾಯಾಳುಗಳು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಯಾಜ್ ಮತ್ತು ರಾಜಾರಾಂ ಇಬ್ಬರೂ ಸ್ನೇಹಿತರಾಗಿದ್ದು, ಕಟ್ಟಡ ನಿರ್ಮಾಣದಲ್ಲಿ ಕಂಬಿ ಕಟ್ಟುವ ಕೆಲಸ ಮಾಡುತ್ತಾರೆ. ಇದೇ ಸ್ನೇಹದಿಂದ ರಾಜಾರಾಂ ಪತ್ನಿಯೊಂದಿಗೆ ನಯಾಜ್ ಸಲುಗೆ ಬೆಳೆಸಿದ್ದ. ಮಂಗಳವಾರ ರಾತ್ರಿ ತನ್ನ ಮನೆಗೆ ಅನು ಅವರನ್ನು ಕರೆದುಕೊಂಡು ಹೋಗಿದ್ದ.

ಕೆಲಸಕ್ಕೆ ತೆರಳಿದ್ದ ರಾಜಾರಾಂ ಮನೆಗೆ ಬಂದಾಗ ಪತ್ನಿ ಮನೆಯಲ್ಲಿ ಇರಲಿಲ್ಲ. ಸ್ನೇಹಿತ ನಯಾಜ್ ಮನೆಗೆ ಹೋದಾಗ ಅಲ್ಲಿ ನಯಾಜ್ ಮತ್ತು ಅನು ನಡುವಿನ ಸಂಬಂಧ ಬಯಲಾಗಿದೆ. ಸಿಟ್ಟಾದ ಆರೋಪಿ ಇಬ್ಬರಿಗೂ ಚೂರಿ ಇರಿದಿದ್ದಾನೆ ಎಂದು ಜಯನಗರ ಠಾಣೆ ಪೊಲೀಸರು ಹೇಳಿದ್ದಾರೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !