ಎಸಿಬಿ ದಾಳಿ; ಕೆ.ಜಿ ಗಟ್ಟಲೆ ಚಿನ್ನ, ಲಕ್ಷಾಂತರ ಹಣ ಪತ್ತೆ

7

ಎಸಿಬಿ ದಾಳಿ; ಕೆ.ಜಿ ಗಟ್ಟಲೆ ಚಿನ್ನ, ಲಕ್ಷಾಂತರ ಹಣ ಪತ್ತೆ

Published:
Updated:

ತುಮಕೂರು: ನಗರ ಹೇಮಾವತಿ ನಾಲಾ ವಲಯದ ಸೂಪರಿಂಟೆಂಡೆಂಟ್ ಎಂಜಿನಿಯರ್ ಎಚ್.ಶಿವಕುಮಾರ್ ಹಾಗೂ ಅವರ ತಂದೆ ಮನೆಯ ಮೇಲೆ ಮಂಗಳವಾರ ಭಷ್ಟಾಚಾರ ನಿಗ್ರಹ ದಳ(ಎಸಿಬಿ) ದಾಳಿ ನಡೆಸಿ ಲಕ್ಷಾಂತರ ಹಣ, ಚಿನ್ನಾಭರಣ ವಶಪಡಿಸಿಕೊಂಡಿದೆ.

ಪತ್ತೆಯಾದ ಚರ ಮತ್ತು ಸ್ಥಿರ ವಿವರ ಇಂತಿದೆ.

ನಗರದಲ್ಲಿ ಎರಡು ಮನೆ, 2 ನಿವೇಶನ, ಕೌತಮಾರನಹಳ್ಳಿಯ ವಿವಿಧ ಸರ್ವೆ ನಂಬರ್‌ಗಳಲ್ಲಿ ಒಟ್ಟು 3.2 ಎಕರೆ ಕೃಷಿ ಜಮೀನು, 2 ಕೆ.ಜಿ 413 ಗ್ರಾಂ ಚಿನ್ನ, 15 ಕೆ.ಜಿ ಬೆಳ್ಳಿ, 1 ಟ್ರ್ಯಾಕ್ಟರ್, 2 ಕಾರ್, 3 ದ್ವಿಚಕ್ರವಾಹನ, ₹ 1.74 ಲಕ್ಷ ನಗದು, ಬ್ಯಾಂಕ್ ಖಾತೆಯಲ್ಲಿ ₹ 11.72 ಲಕ್ಷ, ₹ 15.31 ಲಕ್ಷ ಗೃಹೋಪಯೋಗಿ ವಸ್ತುಗಳು ತನಿಖೆ ವೇಳೆ ಪತ್ತೆಯಾಗಿವೆ ಎಂದು ಎಸಿಬಿ ತಿಳಿಸಿದೆ.

ತನಿಖೆ ಮುಂದುವರಿದಿದ್ದು, ಆಸ್ತಿ ಮೂಲದ ಬಗ್ಗೆ ತನಿಖೆ, ದಾಖಲೆ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !