ಆತ್ಮಹತ್ಯೆ ಪ್ರಕರಣ; ಮೂವರ ಬಂಧನ

7

ಆತ್ಮಹತ್ಯೆ ಪ್ರಕರಣ; ಮೂವರ ಬಂಧನ

Published:
Updated:

ತುರುವೇಕೆರೆ: ಪಟ್ಟಣದ ಬಾವಿಕೆರೆಯಲ್ಲಿ ಆ.6ರಂದು ಮೀನಾಕ್ಷಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಬಂಧಿತರು ಮೀನಾಕ್ಷಿಯ ಮಾವ ಹಳ್ಳಿಕಾರ್ ಬೀದಿಯ ಶಿವಣ್ಣ, ಅತ್ತೆ ಭಾಗ್ಯಮ್ಮ ಹಾಗೂ ಅಳಿಯ ಯೋಗಾನಂದ್ ಬಂಧಿತ ಆರೋಪಿಗಳಾಗಿದ್ದಾರೆ.

ಮೀನಾಕ್ಷಿ ಶಿವಣ್ಣನವರ ಮಗ ಉಮೇಶ್ ಅವರೊಂದಿಗೆ ಮೀನಾಕ್ಷಿ ಮದುವೆ ಮೂರು ತಿಂಗಳ ಹಿಂದೆ ನಡೆದಿತ್ತು. ಕೌಟುಂಬಿಕ ಕಲಹದಿಂದ ಬೆಸತ್ತು ಮೀನಾಕ್ಷಿ ಆ.6ರಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆಕೆಯ ಪತಿ ಉಮೇಶನೂ  ವಿಷ ಸೇವಿಸಿ ಮೃತಪಟ್ಟಿದ್ದ.

ಮೀನಾಕ್ಷಿ ಸಂಬಂಧಿಕರ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 1

    Sad
  • 0

    Frustrated
  • 0

    Angry

Comments:

0 comments

Write the first review for this !