ಏಕಶಿಲಾ ಬೆಟ್ಟಕ್ಕೆ ಚಾರಣ; ಪ್ರಪಾತಕ್ಕೆ ಬಿದ್ದ ಯುವಕ

7
7 ತಾಸು ಕಾರ್ಯಾಚರಣೆ ನಡೆಸಿದರೂ ಪತ್ತೆಯಾಗದ ಯುವಕ

ಏಕಶಿಲಾ ಬೆಟ್ಟಕ್ಕೆ ಚಾರಣ; ಪ್ರಪಾತಕ್ಕೆ ಬಿದ್ದ ಯುವಕ

Published:
Updated:
Deccan Herald

ಮಧುಗಿರಿ: ಸ್ವಾತಂತ್ರ್ಯ ದಿನ ಬೆಟ್ಟ ಏರಿ ಸಂಭ್ರಮಿಸಲು ಇಲ್ಲಿನ ಏಕಶಿಲಾ ಬೆಟ್ಟಕ್ಕೆ ಬುಧವಾರ ಬೆಳಿಗ್ಗೆ ಚಾರಣ ಕೈಗೊಂಡ ಯುವಕ ಕಾಲು ಜಾರಿ 250 ಅಡಿ ಆಳಕ್ಕೆ ಬಿದ್ದಿದ್ದು, ಪೊಲೀಸರು ಪತ್ತೆ ಕಾರ್ಯ ಕೈಗೊಂಡಿದ್ದಾರೆ.

ಬಹಳ ಆಳಕ್ಕೆ ಬಿದ್ದಿರುವುದರಿಂದ ಯುವಕ ಬದುಕಿರುವುದೇ ಅನುಮಾನವಿದೆ ಎಂದು ಕಾರ್ಯಾಚರಣೆ ತಂಡದ ಅಧಿಕಾರಿಗಳು ಹೇಳಿದ್ದಾರೆ.

ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಸತತ 7 ಗಂಟೆ ಕಾರ್ಯಾಚರಣೆ ನಡೆಸಿದರೂ ಯುವಕ ಬಿದ್ದಿರುವ ಸ್ಥಳಕ್ಕೆ ತಲುಪಲು ಮಳೆ ಕಾರಣದಿಂದ ಸಾಧ್ಯವಾಗಲಿಲ್ಲ. ಗುರುವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ನಡೆಸಲಿದ್ದಾರೆ.

ಅಲ್ಲದೇ, ಚಿತ್ರದುರ್ಗದ ಕೋತಿರಾಜ್ ನೇತೃತ್ವದ ನಾಲ್ವರ ತಂಡವು ಮಧುಗಿರಿಗೆ ರಾತ್ರಿ ಧಾವಿಸಿದ್ದು, ಗುರುವಾರ ಬೆಳಿಗ್ಗೆ 5 ಗಂಟೆ ಹೊತ್ತಿಗೆ ಕಾರ್ಯಾಚರಣೆಗಿಳಿಯಲಿದೆ.

‘ಬೆಳಿಗ್ಗೆ ಚಾರಣ ಮಾಡುತ್ತಿದ್ದ ಯುವಕ ಕಾಲು ಜಾರಿ ಬೀಳುವುದನ್ನು ದೂರದಿಂದ ಕೆಲವರು ನೋಡಿದ್ದು, ಬಿದ್ದ ಯುವಕ ಯಾರು, ಎಲ್ಲಿಂದ ಬಂದಿದ್ದ, ಆತನ ವಯಸ್ಸು ಎಷ್ಟು ಎಂಬುದು ಗೊತ್ತಿಲ್ಲ. ಆತ ಬದುಕಿದ್ದಾನೊ, ಮೃತಪಟ್ಟಿದ್ದಾನೆ ಎಂಬುದೂ ಗೊತ್ತಾಗುತ್ತಿಲ್ಲ. ಯುವಕ ಬಿದ್ದ ಆಳದ ಸ್ಥಳಕ್ಕೆ ಸಂಜೆಯವರೆಗೂ ಪ್ರಯತ್ನಿಸಿದರೂ ಹೋಗಲು ಆಗಲಿಲ್ಲ. ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ನಡೆಸಲಾಗುತ್ತದೆ’ ಎಂದು ಮಧುಗಿರಿ ಠಾಣೆ ಸಬ್‌ ಇನ್‌ಸ್ಪೆಕ್ಟರ್ ಪಾಲಾಕ್ಷ ತಿಳಿಸಿದರು.

ಪ್ರತಿ ವರ್ಷ ಚಾರಣಿಗರ ದಂಡು: ಸ್ವಾತಂತ್ರ್ಯ ದಿನಾಚರಣೆ ದಿನ ಪ್ರತಿ ವರ್ಷ ಬೆಂಗಳೂರು ಸೇರಿದಂತೆ ದೂರದ ನಗರ, ಪಟ್ಟಣಗಳಿಂದ ಜನರು ಏಕಾಶಿಲ ಬೆಟ್ಟಕ್ಕೆ ಚಾರಣ ಕೈಗೊಳ್ಳುತ್ತಾರೆ. ಪ್ರತಿ ವರ್ಷದಂತೆ ಈ ವರ್ಷವೂ ಸಾವಿರಾರು ಜನರು ಚಾರಣ ಕೈಗೊಳ್ಳಲು ಬಂದಿದ್ದ ವೇಳೆ ಯುವಕ ಆಳಕ್ಕೆ ಬಿದ್ದಿದ್ದಾನೆ.

ಉಪವಿಭಾಗಾಧಿಕಾರಿ ಹೇಳಿಕೆ: ‘ಯುವಕ ಬಿದ್ದಿರುವ ಸ್ಥಳ ಸಾಕಷ್ಟು ಆಳ ಮತ್ತು ಕಡಿದಾಗಿದೆ. ಅಲ್ಲಿಗೆ ತೆರಳಲು ಕಾರ್ಯಾಚರಣೆ ತಂಡಗಳಿಗೆ ಕಷ್ಟವಾಯಿತು. ಗುರುವಾರ ಬೆಳಿಗ್ಗೆ ಕೋತಿರಾಜ್ ತಂಡ, ಪೊಲೀಸರು, ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಲಿದ್ದಾರೆ ಎಂದು ಉಪವಿಭಾಗಾಧಿಕಾರಿ ವೆಂಕಟೇಶ್ ಪ್ರಜಾವಾಣಿಗೆ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 3

  Happy
 • 2

  Amused
 • 5

  Sad
 • 0

  Frustrated
 • 1

  Angry

Comments:

0 comments

Write the first review for this !