ಆಭರಣ, ವಾಹನ ಕಳ್ಳನ ಬಂಧನ

7

ಆಭರಣ, ವಾಹನ ಕಳ್ಳನ ಬಂಧನ

Published:
Updated:
Deccan Herald

ತುಮಕೂರು: ಮನೆ ಬೀಗ ಮುರಿದು ಆಭರಣ, ವಾಚ್, ದ್ವಿಚಕ್ರವಾಹನ ಕಳವು ಮಾಡುತ್ತಿದ್ದ ಸರ್ವರ್‌ ಖಾನ್ ಎಂಬ ಕಳ್ಳನನ್ನು ನಗರದ ತಿಲಕ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯು ನಗರದ ಹೆಗ್ಗೆಯ ಈದ್ಗಾ ಮಸೀದಿ ಮುಂಭಾಗದಲ್ಲಿ ವೆಲ್ಡಿಂಗ್ ಕೆಲಸಗಾರ. ಅನುಮಾನದ ಮೇರೆಗೆ ಕರೆ ತಂದು ವಿಚಾರಣೆ ಮಾಡಿದಾಗ ಈತ ಕಳ್ಳತನ ಮಾಡಿರುವುದು ಪೊಲೀಸರಿಗೆ ಗೊತ್ತಾಗಿದೆ.

₹ 2.15 ಲಕ್ಷ ಮೊತ್ತದ ಬೆಳ್ಳಿ ಆಭರಣ ಮತ್ತು ಎರಡು ದ್ವಿಚಕ್ರವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯು ಬೆಂಗಳೂರಿನ ಶಿವಾಜಿನಗರದ ತಬ್ರೇಜ್ ಹಾಗೂ ಕುಣಿಗಲ್‌ ಪಟ್ಟಣದ ಮಹಮ್ಮದ್ ನವಾಜ್ ಎಂಬುವವರೊಂದಿಗೆ ಕಳ್ಳತನ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ನಗರ ಡಿಎಸ್ಪಿ ಕೆ.ಎಸ್. ನಾಗರಾಜ್ ನೇತೃತ್ವದಲ್ಲಿ ಸಿಪಿಐ ರಾಧಾಕೃಷ್ಣ, ಸಬ್ ಇನ್‌ಸ್ಪೆಕ್ಟರ್ ಲಕ್ಷ್ಮಯ್ಯ, ಸಿಬ್ಬಂದಿ ಸೈಮನ್ ವಿಕ್ಟರ್, ಮುನಾವರ್ ಪಾಷ, ಪಿ.ಶಾಂತರಾಜು, ಎಂ.ಆರ್.ಸತ್ಯನಾರಾಯಣ,  ಪ್ರಸನ್ನಕುಮಾರ್, ರತನ್‌ಕುಮಾರ್ ಅವರ ತಂಡ ಆರೋಪಿಯನ್ನು ಬಂಧಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !