ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು ವಿವಿ ಪ್ರಾಧ್ಯಾಪಕ ಈಶ್ವರ ನಿಗೂಢ ಕಣ್ಮರೆ

ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಪದವಿ ಕಾಲೇಜಿನ ಮಾಜಿ ಪ್ರಾಂಶುಪಾಲ
Last Updated 13 ಡಿಸೆಂಬರ್ 2018, 19:15 IST
ಅಕ್ಷರ ಗಾತ್ರ

ತುಮಕೂರು: ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಎಚ್.ವೈ.ಈಶ್ವರ ನಿಗೂಢವಾಗಿ ಕಣ್ಮರೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

ಭಾನುವಾರದಿಂದ (ಡಿ.9) ಕಾಣೆಯಾಗಿದ್ದು, ಐದು ದಿನಗಳಾದರೂ ಅವರು ಪತ್ತೆಯಾಗದೇ ಇರುವುದು ಕುಟುಂಬದಲ್ಲಿ ಆತಂಕ ಹೆಚ್ಚಾಗಿದೆ.

ಅಂದು ಸಂಜೆ ವಾಯುವಿಹಾರಕ್ಕೆ ತೆರಳಿದ್ದ ಅವರು ಪುನಃ ಮನೆಗೆ ಬಂದಿಲ್ಲ. ಮೊಬೈಲ್, ಎಟಿಎಂ ಕಾರ್ಡ್, ಪರ್ಸ್ ಎಲ್ಲವನ್ನೂ ಮನೆಯಲ್ಲಿಯೇ ಬಿಟ್ಟು ಹೋಗಿದ್ದಾರೆ. ರಾತ್ರಿ ಬಹಳ ಹೊತ್ತಾದರೂ ಬರದೇ ಇದ್ದಾಗ ಹುಡುಕಾಡಿ ನಂತರ ಹೊಸ ಬಡಾವಣೆ ಠಾಣೆಗೆ ದೂರು ನೀಡಿದೆವು ಎಂದು ಈಶ್ವರ ಅವರ ಪುತ್ರ ಪವನ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾಗಿದ್ದ ಅವರು 9 ತಿಂಗಳ ಹಿಂದೆ ಡಾ.ಶಾಲಿನಿ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದರು. ಆಡಳಿತಾತ್ಮಕ ವಿಚಾರಕ್ಕೆ ಸಂಬಂಧಪಟ್ಟಂತೆ ಅವರಿಗೆ ಒತ್ತಡ ಇತ್ತು. ಅದನ್ನು ನನ್ನ ಬಳಿ ಹೇಳಿಕೊಂಡಿದ್ದರು. ಈ ಕಾರಣಕ್ಕೂ ಅವರು ಬೇಸರಗೊಂಡು ಕಣ್ಮರೆಯಾಗಿರುವ ಸಾಧ್ಯತೆ ಇದೆ ಎಂದು ಪವನ್ ಹೇಳಿದ್ದಾರೆ.

ಪ್ರಾಂಶುಪಾಲರ ಹೇಳಿಕೆ:

‘ಈಶ್ವರ ಅವರಿಗೆ ಕಾಲೇಜಿನಿಂದ ಯಾವುದೇ ರೀತಿಯ ಒತ್ತಡಗಳಿರಲಿಲ್ಲ. ಕಾಲೇಜಿನ ಇತರ ಪ್ರಾಧ್ಯಾಪಕರು, ಸಿಬ್ಬಂದಿ ಸಹಕಾರದಿಂದಲೇ ನಡೆದುಕೊಂಡಿದ್ದಾರೆ. ಸ್ವಲ್ಪ ಅನಾರೋಗ್ಯ ಇದ್ದಾಗಲೂ ಅವರಿಗೆ ಮಾನವೀಯತೆಯಿಂದ ನಡೆದುಕೊಳ್ಳಲಾಗಿದೆ’ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಶಾಲಿನಿ ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT