ಮಂಗಳವಾರ, ನವೆಂಬರ್ 12, 2019
28 °C

ಅಸಭ್ಯ ವರ್ತನೆ; ಧರ್ಮದೇಟು ತಿಂದ ಯುವಕ

Published:
Updated:
Prajavani

ಕುಣಿಗಲ್: ಸರ್ಕಾರಿ ಪ್ರಥಮದರ್ಜೆ ಕಾಲೇಜು ಬಳಿ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಯುವಕನಿಗೆ  ಯುವತಿಯ ಪೋಷಕರು ಧರ್ಮದೇಟು ನೀಡಿದ್ದಾರೆ.

ಗ್ರಾಮೀಣ ಪ್ರದೇಶದಿಂದ ಕಾಲೇಜಿಗೆ ತಿಪ್ಪನಾಯಕನ ಹಳ್ಳಿಯಿಂದ ಬರುತ್ತಿದ್ದ ರಕ್ಷಿತ್, ಯುವತಿಯೊಂದಿಗೆ ಕಳೆದ ಎರಡು ತಿಂಗಳಿಂದಲೂ ಅಸಭ್ಯವಾಗಿ ವರ್ತಿಸುತ್ತಿದ್ದ. ಇದರಿಂದ ಬೇಸತ್ತ ಯುವತಿ ಪೋಷಕರ ಗಮನಕ್ಕೆ ತಂದಿದ್ದರು.

ಪೋಷಕರು ಸಹ ಯುವಕನಿಗೆ ಬುದ್ದಿಮಾತು ಹೇಳಿದ್ದರೂ ಚಾಳಿಯನ್ನು ಮುಂದುವರಿಸಿದ್ದ. ಯುವತಿ ವಿದ್ಯಾಭ್ಯಾಸವನ್ನೇ ಮೊಟಕುಗೊಳಿಸುವ ನಿರ್ಧಾರಕ್ಕೆ ಬಂದಿದ್ದರಿಂದ ಬೇಸತ್ತ ಪೋಷಕರ ಕಡೆಯವರು ವಿಧಿ ಇಲ್ಲದೆ ಕಾಲೇಜು ಬಳಿ ಬಂದು ಯವಕನಿಗೆ ಧರ್ಮದೇಟು ನೀಡಿದ್ದಾರೆ. ಯುವಕ ಪರಾರಿಯಾಗಿದ್ದಾನೆ.

 

ಪ್ರತಿಕ್ರಿಯಿಸಿ (+)