ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯ ಕದ್ದು ಸುಳ್ಳು ಕಥೆ ಕಟ್ಟಿದ ಬಾರ್‌ ನೌಕರನ ಬಂಧನ

Last Updated 27 ಮೇ 2020, 17:16 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಲಾಕ್‌ಡೌನ್ ಅವಧಿಯಲ್ಲಿ ಬಾರ್‌ನಲ್ಲಿದ್ದ ಮದ್ಯವನ್ನು ಅಕ್ರಮವಾಗಿ ಮಾರಿ ಕಳವು ನಡೆದಿದೆ ಎಂದು ಕಥೆ ಕಟ್ಟಿದ್ದ ಬಾರ್ ನೌಕರ ದಿನೇಶ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಜೆ.ವೆಂಕಟಾಪುರದ ಸ್ವಸ್ತಿಕ್ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ₹1.5 ಲಕ್ಷ ಮೌಲ್ಯದ ಮದ್ಯ ಕಳುವಾಗಿದೆ ಎಂದು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು.

‘ಆರೋಪಿ ದಿನೇಶ್ ಬಾರ್‌ನಲ್ಲಿದ್ದ ಮದ್ಯವನ್ನು ಹೆಚ್ಚಿನ ಬೆಲೆಗೆ ಮಾರಿದ್ದಾರೆ. ಅಬಕಾರಿ ಇಲಾಖೆ ಅಧಿಕಾರಿಗಳು ಪರಿಶೀಲನೆಗೆ ಬರುತ್ತೇವೆ ಎಂದು ದೂರವಾಣಿ ಮೂಲಕ ತಿಳಿಸಿದಾಗ, ರಾತ್ರಿ ವೇಳೆ ಕಳವು ನಡೆದಿರುವ ರೀತಿ ಕಾಣುವ ಹಾಗೆ ಬಾಗಿಲನ್ನು ಮೀಟಿ ಕಥೆ ಸೃಷ್ಟಿಸಿದ್ದಾರೆ’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.

ಸಿ.ಸಿ ಟಿ.ವಿ. ಕ್ಯಾಮೆರಾ ಹಾಗೂ ಇನ್ನಿತರ ಸಾಕ್ಷಿಗಳು ಸಿಕ್ಕಿವೆ. ಕೃತ್ಯಕ್ಕೆ ಬಳಸಿರುವ ಆಯುಧ ಮತ್ತು ₹1.5 ಲಕ್ಷ ಹಣ ಕೂಡ ಸಿಕ್ಕಿದೆ ಎಂದು ಹೇಳಿದರು.

ಡಿವೈಎಸ್‌ಪಿ ಶ್ರೀನಿವಾಸ್, ಸಿಪಿಐ ಸುರೇಶ್, ಎಸ್‌ಐ ಲಿಯಾಖತ್ತುಲ್ಲ ಮತ್ತು ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT