ಬುಧವಾರ, ಜೂನ್ 23, 2021
22 °C

ವಿಚಾರಣೆಗೆ ಕರೆ ತಂದಿದ್ದ ಆರೋಪಿ ಪರಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋರ: ವಿಚಾರಣೆಗಾಗಿ ಕರೆ ತಂದಿದ್ದ ಆರೋಪಿಯೊಬ್ಬ ಗುರುವಾರ ರಾತ್ರಿ ಪೊಲೀಸ್ ಠಾಣೆಯಿಂದ ಪರಾರಿ ಆಗಿದ್ದಾನೆ. ಮಧುಗಿರಿ ತಾಲ್ಲೂಕು ಮಿಡಿಗೇಶಿ ಮೂಲದ ರಂಗಪ್ಪ ಎಂಬಾತನನ್ನು ಸರಗಳ್ಳತನಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ವಿಚಾರಣೆಗಾಗಿ ಠಾಣೆಗೆ ಕರೆತರಲಾಗಿತ್ತು.

ಬೆಂಗಳೂರು, ಕೋರ, ಬೆಳ್ಳಾವಿ, ತಿಲಕ್ ಪಾರ್ಕ್ ಪೊಲಿಸ್ ಠಾಣೆಗಳಲ್ಲಿ ಈತನ ವಿರುದ್ಧ ಸರಗಳ್ಳತನದ ಪ್ರಕರಣಗಳು ಇದ್ದವು. ಕೋರ ಪೊಲೀಸರು ವಿಚಾರಣೆಗೆ ಕರೆತಂದಿದ್ದರು. ಊಟ ಮಾಡಿದ ಖಾಲಿ ಪೊಟ್ಟಣವನ್ನು ಆಚೆ ಎಸೆಯುವ ನೆಪದಲ್ಲಿ ಕುಂಟುತ್ತ ಹೋದ ಆರೋಪಿ ಅಲ್ಲಿಂದ ಓಟ ಕಿತ್ತಿದ್ದಾನೆ ಎನ್ನಲಾಗಿದೆ. 

ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಠಾಣೆಯ ಸಿಸಿ ಟಿವಿ ಕ್ಯಾಮೆರಾದ ದೃಶ್ಯಗಳನ್ನು ತರಿಸಿಕೊಂಡಿದ್ದಾರೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.