ತುಮಕೂರು: ‘ಬಹುಮತವಿಲ್ಲದ ಸರ್ಕಾರ ಅಂಗವಿಕಲ ಮಗುವಿದ್ದಂತೆ, ಇದರಿಂದ ಯಾರಿಗೂ ಉಪಯೋಗವಿಲ್ಲ’ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆಯನ್ನು ಜಿಲ್ಲಾ ಅಂಗವಿಕಲರ ಕಲ್ಯಾಣ ವೇದಿಕೆ ಖಂಡಿಸಿದೆ.

ತಮ್ಮ ಶಕ್ತಾನುಸಾರ ದುಡಿದು, ಬದುಕುತ್ತಿರುವ ಅಂಗವಿಕಲ ಸಮುದಾಯವನ್ನು ಅಪಮಾನಿಸಿದ್ದಾರೆ. ಕೂಡಲೇ ಅವರು ಅಂಗವಿಕಲರ ಬಹಿರಂಗ ಕ್ಷಮೆ ಕೇಳಬೇಕು ಎಂದು ವೇದಿಕೆ ಅಧ್ಯಕ್ಷ ಸಿ.ಗಂಗರಾಜು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ 20 ಲಕ್ಷ ಅಂಗವಿಕಲರು ಇದ್ದಾರೆ. ಸರ್ಕಾರದ ಸೌಲಭ್ಯದ ಜೊತೆಗೆ ಸಂಘ ಸಂಸ್ಥೆಗಳ ಸಹಕಾರದಿಂದ ಸಣ್ಣ ಅಂಗಡಿ, ಸ್ವಯಂ ಉದ್ಯೋಗ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಅಂಗವಿಕಲರು ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಯಾರನ್ನೋ ಹೀಯಾಳಿಸುವ ಭರದಲ್ಲಿ ಅಂಗವಿಕಲರ ಹೆಸರನ್ನು ಅವಮಾನದ ರೀತಿ ಬಳಕೆ ಮಾಡಿರುವುದನ್ನು ಖಂಡಿಸಿದ್ದಾರೆ.

ಸಿ.ಟಿ.ರವಿ ಕೂಡಲೇ ಅಂಗವಿಕಲ ಸಮುದಾಯದ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಬೃಹತ್ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.