ಶುಕ್ರವಾರ, ಜೂನ್ 18, 2021
21 °C

ಕರ್ಫ್ಯೂ: ಕೊಬ್ಬರಿ ಹರಾಜು ರದ್ದು

ಎಚ್.ಬಿ.ಸುಪ್ರತೀಕ್ Updated:

ಅಕ್ಷರ ಗಾತ್ರ : | |

Prajavani

ತಿಪಟೂರು: ಏಷ್ಯಾದ ಅತಿ ದೊಡ್ಡ ಕೊಬ್ಬರಿ ಮಾರುಕಟ್ಟೆ ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಕೋವಿಡ್‌ನಿಂದ ಹರಾಜು ರದ್ದುಗೊಳಿಸಿದ್ದು, ರೈತರು ಮತ್ತು ರವಾನೆದಾರರು ಸರ್ಕಾರದ ನಿಲುವನ್ನು ಖಂಡಿಸಿದ್ದಾರೆ.

ಕಳೆದ ವಾರದಿಂದಷ್ಟೇ ಕ್ವಿಂಟಲ್‌ಗೆ ಕೊಬ್ಬರಿ ಧಾರಣೆ ₹16 ಸಾವಿರದ ಗಡಿ ದಾಟಿದ್ದರಿಂದ ಸಂತಸಗೊಂಡಿದ್ದ ಕೃಷಿಕರು ಸರ್ಕಾರದ ನಿರ್ಧಾರದಿಂದ ಬೇಸರಗೊಂಡಿದ್ದಾರೆ.

ಕೃಷಿಕರ ಯಾವುದೇ ವ್ಯಾಪಾರ, ವಹಿವಾಟಿಗೆ ತೊಂದರೆ ನೀಡುವುದಿಲ್ಲ ಎನ್ನುವ ಸರ್ಕಾರ ರೈತರು ಬೆಳೆದ ಕೊಬ್ಬರಿ ಹರಾಜು ನಿಲ್ಲಿಸಿ ತೊಂದರೆ ನೀಡಿದ್ದಾರೆ. ವಾರಕ್ಕೆ ಎರಡು ದಿನ ಅಂದರೆ ಬುಧವಾರ ಮತ್ತು ಶನಿವಾರ ಕೊಬ್ಬರಿ ಹರಾಜು ಪ್ರಕ್ರಿಯೆ ನಡೆಯುತ್ತದೆ. ಆದರೆ ಶನಿವಾರ ವಾರಾಂತ್ಯದ ಕರ್ಫ್ಯೂ ಇರುವುದರಿಂದ ಮಾರುಕಟ್ಟೆ ತೆರೆಯದಂತೆ ಸೂಚಿಸಲಾಗಿತ್ತು.

ದಿನಗೂಲಿಗಳಿಗೆ ತೊಂದರೆ: ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ ಸುಮಾರು ಎರಡು ಸಾವಿರದಷ್ಟು ದಿನಗೂಲಿ ನೌಕರರಿಗೆ ಕೆಲಸ ಒದಗಿಸಿರುವ ಸ್ಥಳವಾಗಿದೆ. ಹರಾಜು ಪ್ರಕ್ರಿಯೆ ಇಲ್ಲದೆ ಅವರಿಗೆ ತೊಂದರೆಯಾಗಿದೆ.

ತಾಲ್ಲೂಕಿನ ಕರಡಳು ಗ್ರಾಮದಲ್ಲಿರುವ ಎಪಿಎಂಸಿ ಉಪಮಾರುಕಟ್ಟೆಯಲ್ಲಿ ಪ್ರತಿ ಮಂಗಳವಾರ ನಡೆಯುವ ಜಾನುವಾರು ಸಂತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು ಎಂದು ಸರ್ಕಾರ ಮತ್ತು ಜಿಲ್ಲಾಡಳಿತ ಆದೇಶಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.