ಸಿಲಿಂಡರ್ ಸ್ಫೋಟ: ತಪ್ಪಿದ ಅಪಾಯ

ಶುಕ್ರವಾರ, ಏಪ್ರಿಲ್ 26, 2019
33 °C

ಸಿಲಿಂಡರ್ ಸ್ಫೋಟ: ತಪ್ಪಿದ ಅಪಾಯ

Published:
Updated:

ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ಹಾಲುಗೌಡನಕಟ್ಟೆಯಲ್ಲಿ ಗ್ರಾಮದ ಕೊಲ್ಲಾಪುರದಮ್ಮ ಜಾತ್ರೆ ಪ್ರಯುಕ್ತ ಅಡುಗೆ ಮಾಡುತ್ತಿದ್ದಾಗ ಸಿಲಿಂಡರ್ ಸ್ಫೋಟಿಸಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

ಜಾತ್ರೆ ಅಂಗವಾಗಿ ಗ್ರಾಮಸ್ಥರೆಲ್ಲ ಸೇರಿ ಅಡುಗೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅಡುಗೆಗೆ ಬಳಸಿದ್ದ ಗ್ಯಾಸ್ ಸಿಲಿಂಡರ್ ಆಕಸ್ಮಿಕವಾಗಿ ಹತ್ತಿಕೊಂಡು ಆತಂಕ ಸೃಷ್ಟಿಸಿತು. ಅದು ಸಣ್ಣದಾಗಿ ಸ್ಫೋಟಿಸಿದರೂ ಯಾವುದೇ ಅಪಾಯ ಸಂಭವಿಸಲಿಲ್ಲ. ಸಿಲಿಂಡರ್‍ನಲ್ಲಿ ಗ್ಯಾಸ್ ಮುಗಿಯುತ್ತಾ ಬಂದಿದ್ದರಿಂದ ಅಪಾಯ ತಪ್ಪಿತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !