ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಡಗಲ್ ದುರ್ಗ: ದಸರಾಕ್ಕೆ ಚಾಲನೆ

Last Updated 27 ಅಕ್ಟೋಬರ್ 2020, 3:42 IST
ಅಕ್ಷರ ಗಾತ್ರ

ಪಾವಗಡ: ತಾಲ್ಲೂಕಿನ ನಿಡಗಲ್ ದುರ್ಗದಲ್ಲಿ ಸೋಮವಾರ ದಸರಾ ಉತ್ಸವಕ್ಕೆ ಚಾಲನೆ ನೀಡಲಾಯಿತು.

ದುರ್ಗಾದೇವಿಯ ಭಾವಚಿತ್ರವನ್ನು ಗ್ರಾಮದ ಮಾರಮ್ಮ ದೇಗುಲದಿಂದ ಕಳಶ ಹೊತ್ತ ಮಹಿಳೆಯರೊಂದಿಗೆ ಮೆರವಣಿಗೆ ಮೂಲಕ ಕರೆ ತರಲಾಯಿತು.

ವಾಲ್ಮೀಕಿ ಆಶ್ರಮದ ವಾಲ್ಮೀಕಿ ಸಂಜಯ ಕುಮಾರ ಸ್ವಾಮೀಜಿ ಮಾತನಾಡಿ, ಕಾಮ, ಕ್ರೋಧ, ಮದ ಮತ್ಸರವನ್ನು ನಿಗ್ರಹಿಸಿ ಲೋಕದ ಕಲ್ಯಾಣಕ್ಕಾಗಿ ಜೀವನ ಮುಡುಪಿಡಬೇಕು ಎಂಬುದು ನವರಾತ್ರಿಯ ಸಂದೇಶ. ಪ್ರಸ್ತುತ ಮನುಜ ಕುಲದಲ್ಲಿ ಮಾನವೀಯತೆ ಕಣ್ಮರೆಯಾಗುತ್ತಿದ್ದು, ಸ್ವಾರ್ಥ ಹೆಚ್ಚುತ್ತಿದೆ. ದೇವಿಯು ಸದ್ಯ ಇರುವ ರೋಗಬಾಧೆಯನ್ನು ನಿಗ್ರಹಿಸಲಿ ಎಂದು ಎಲ್ಲರು ಪ್ರಾರ್ಥಿಸಬೇಕು ಎಂದರು.

ವಾಲ್ಮೀಕಿ ಜಾಗೃತಿ ವೇದಿಕೆ ಅಧ್ಯಕ್ಷ ಲೋಕೇಶ್ ಪಾಳೇಗಾರ್, ಈ ವರ್ಷದ ನಿಡಗಲ್ ದುರ್ಗದಲ್ಲಿ ದಸರಾ ಉತ್ಸವ ಸರಳವಾಗಿ ಆಚರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿವರ್ಷ ವಿಜೃಂಭಣೆಯಿಂದ ದಸರಾ ಆಚರಿಸಲಾಗುವುದು ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಾಳಮ್ಮ ಸುಬ್ಬರಾಯಪ್ಪ, ಸದಸ್ಯರಾದ ಶಿವಪ್ಪ, ನರಸಿಂಹಲು, ವೆಂಕಟಾಪುರ ರವಿ, ಉಪನ್ಯಾಸಕರಾದ ತಿಪ್ಪೇ ರುದ್ರಪ್ಪ, ಸತೀಶ್, ನರಸಿಂಹಮೂರ್ತಿ, ಮುಖಂಡ ತಿಪ್ಪೇಸ್ವಾಮಿ, ಮಹಾರಾಜು, ಗೋವಿಂದಪ್ಪ, ರಾಮಪ್ಪ, ಪಾಲಯ್ಯ, ರಾಜು, ತಿಮ್ಮಯ್ಯ, ಪಾಲಾಕ್ಷ, ಫಲ್ಗುಣ, ಶಂಕರಪ್ಪ, ಮಲ್ಲಿಕಪ್ಪ, ಸಣ್ಣಓಬಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT