ತುಮಕೂರು ಲೋಕಸಭಾ ಕ್ಷೇತ್ರ: ಮತದಾನಕ್ಕೆ ಸಕಲ ಸಿದ್ಧತೆ

ಮಂಗಳವಾರ, ಏಪ್ರಿಲ್ 23, 2019
27 °C
ಕ್ಷೇತ್ರದ 8 ವಿಧಾನ ಸಭಾ ಕ್ಷೇತ್ರದಲ್ಲಿ 16 ಲಕ್ಷ ಮತದಾರರು, ಬಹಿರಂಗ ಪ್ರಚಾರ ಇಂದೇ ಅಂತ್ಯ; ಚುನಾವಣಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್

ತುಮಕೂರು ಲೋಕಸಭಾ ಕ್ಷೇತ್ರ: ಮತದಾನಕ್ಕೆ ಸಕಲ ಸಿದ್ಧತೆ

Published:
Updated:
Prajavani

ತುಮಕೂರು: ‘ಏಪ್ರಿಲ್ 18ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ತುಮಕೂರು ಕ್ಷೇತ್ರ ಸಕಲ ರೀತಿ ಸಿದ್ಧಗೊಂಡಿದ್ದು, ಚುನಾವಣೆಯನ್ನು ಶಾಂತಿ ಮತ್ತು ಸುವ್ಯವಸ್ಥಿತ ರೀತಿಯಲ್ಲಿ ನಡೆಸಲು ಅಗತ್ಯ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮತದಾರರು ನಿರ್ಭೀತಿಯಿಂದ ಮತಗಟ್ಟೆಗೆ ಬಂದು ಮತ ಚಲಾಯಿಸಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಮನವಿ ಮಾಡಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಬಾರಿ 16.5 ಲಕ್ಷ ಮತದಾರರಿದ್ದು, ಈಗಾಗಲೇ ಮತದಾರರಿಗೆ ಗುರುತಿನ ಚೀಟಿಗಳನ್ನು ವಿತರಣೆ ಮಾಡಲಾಗಿದೆ. ಪರಿಷ್ಕೃತ ಮತದಾರರ ಚೀಟಿಗಳನ್ನು ಮನೆ ಮನೆಗೆ ವಿತರಿಸಲಾಗುತ್ತಿದೆ. ಏಪ್ರಿಲ್ 17ರಂದು ಚುನಾವಣಾ ಸಿಬ್ಬಂದಿ ಮತಗಟ್ಟೆಗೆ ತೆರಳಲಿದ್ದಾರೆ ಎಂದರು.

35 ಚೆಕ್‌ ಪೋಸ್ಟ್: ಚುನಾವಣಾ ಅಕ್ರಮ ತಡೆಯಲು 35 ಚೆಕ್ ಪೋಸ್ಟ್, 230 ಸೆಕ್ಟರ್ ಅಧಿಕಾರಿ, 165 ಸೆಕ್ಟರಲ್ ಮೊಬೈಲ್ ,28 ಸಂಚಾರಿ ವಿಚಕ್ಷಣಾ ದಳಗಳನ್ನು ರಚಿಸಲಾಗಿದೆ. ಇವು ಹದ್ದಿನ ಕಣ್ಣಿಟ್ಟು ಕೆಲಸ ಮಾಡಲಿದ್ದು, ಸಾರ್ವಜನಿಕರಿಗೆ ಚುನಾವಣಾ ಅಕ್ರಮಗಳು ಕಂಡು ಬಂದಲ್ಲಿ ಸಿವಿಜಿಲ್ ಆ್ಯಪ್ ಬಳಸಿ ವಿಡಿಯೊ, ಚಿತ್ರಗಳನ್ನು ಗಮನಕ್ಕೆ ತರಬಹುದು. ಕೇವಲ 20 ನಿಮಿಷದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.

ಅಧಿಕಾರಿಗಳ ಲೋಪವಿದ್ದರೆ ಕ್ರಮ: ಕೆಲ ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿರುವ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ವಿಚಾರಣೆಗೆ ಆದೇಶಿಸಿದ್ದು, ಅಧಿಕಾರಿಗಳ ಲೋಪವಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾಧಿಕಾರಿ ಡಾ.ರಾಕೇಶ್‌ಕುಮಾರ್ ಹೇಳಿದರು.

ಸಹಾಯಕ ಚುನಾವಣಾಧಿಕಾರಿ ಕೆ.ಚನ್ನಬಸಪ್ಪ ಗೋಷ್ಠಿಯಲ್ಲಿದ್ದರು.

 ಅಂಕಿ ಅಂಶಗಳು

22.97 ಲಕ್ಷ ಜಿಲ್ಲೆಯಲ್ಲಿರುವ ಮತದಾರರು

16.8 ಲಕ್ಷ ತುಮಕೂರು ಕ್ಷೇತ್ರದಲ್ಲಿರುವ ಮತದಾರರು

8.3 ಲಕ್ಷ ಪುರುಷ ಮತದಾರರು

8.4 ಲಕ್ಷ ಮಹಿಳಾ ಮತದಾರರು

120 ಲೈಂಗಿಕ ಅಲ್ಪಸಂಖ್ಯಾತರು

41.8 ಸಾವಿರ ಚಿತ್ರದುರ್ಗ ಕ್ಷೇತ್ರ ವ್ಯಾಪ್ತಿಯ ಶಿರಾ, ಪಾವಗಡ ಮತದಾರರು

19.9 ಲಕ್ಷ ಬೆಂಗಳೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಕುಣಿಗಲ್ ನ ಮತದಾರರು

ಮತಗಟ್ಟೆ ಸಿಬ್ಬಂದಿ

2684 ಒಟ್ಟು ಮತಗಟ್ಟೆಗಳು

12924 ಮತಗಟ್ಟೆಗೆ ನೇಮಿಸಿದ ಸಿಬ್ಬಂದಿ

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !