ಶಿವಣ್ಣ ದಾಖಲೆ ಕೊಟ್ಟರೆ ಕ್ರಮ; ಡಾ.ಪರಮೇಶ್ವರ

7

ಶಿವಣ್ಣ ದಾಖಲೆ ಕೊಟ್ಟರೆ ಕ್ರಮ; ಡಾ.ಪರಮೇಶ್ವರ

Published:
Updated:

ತುಮಕೂರು: ತುಮಕೂರಿನಲ್ಲಿ ಡ್ರಗ್ಸ್ ಮಾಫಿಯಾ ಸಕ್ರಿಯವಾಗಿದೆ ಎಂಬುದು, ಅಕ್ರಮ ಚಟುವಟಿಕೆಗಳು ಹೆಚ್ಚಾಗಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಮಾಜಿ ಸಚಿವ ಶಿವಣ್ಣ ಅವರು ಇಂತಹ ಕೃತ್ಯಗಳು ನಡೆಯುವ ಸ್ಥಳ, ವ್ಯಕ್ತಿಗಳ ಬಗ್ಗೆ ಮಾಹಿತಿ ಕೊಟ್ಟರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ನಮ್ಮ ಪೊಲೀಸರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಡ್ರಗ್ಸ್ ಮಾಫಿಯಾ ಚಟುವಟಿಕೆಗಳು ನಡೆಯುತ್ತಿವೆ ಎಂಬುದು ನಂಬಲಿಕ್ಕೆ ಆಗುವುದಿಲ್ಲ. ಶಿವಣ್ಣ ನಿಖರ ಮಾಹಿತಿ ಒದಗಿಸಿದರೆ ಕ್ರಮ ಕೈಗೊಳ್ಳಬಹುದು. ಈ ಕಾರಣಕ್ಕೆ ಅವರಿಗೆ ಅಭಿನಂದನೆಯನ್ನೂ ಸಲ್ಲಿಸುತ್ತೇನೆ’ ಎಂದರು.

‘ಸೈಬರ್ ಅಪರಾಧ ಚಟುವಟಿಕೆ ನಿಯಂತ್ರಣಕ್ಕೆ ಸರ್ಕಾರ ಬೆಂಗಳೂರಿನಲ್ಲಿ ಸೈಬರ್ ಠಾಣೆಗಳನ್ನು ಪ್ರಾರಂಭ ಮಾಡುತ್ತಿದೆ. ಇದಕ್ಕಾಗಿ ವಿಶೇಷ ತರಬೇತಿ ಕೊಡಲಾಗುತ್ತಿದೆ’ ಎಂದು ಹೇಳಿದರು.

ಸೈಬರ್ ಘಟಕಗಳ ಪ್ರಾರಂಭಕ್ಕೆ ಇನ್ಫೊಸಿಸ್‌ ಸಂಸ್ಥೆಯು ಬಹಳಷ್ಟು ಸಹಕಾರ ನೀಡಿದೆ. ಸೈಬರ್ ಅಪರಾಧಗಳು ಹೆಚ್ಚಾಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ತಿಳಿಸಿದರು.

ಸಂವಿಧಾನ ಸುಡುವುದು, ಅದನ್ನು ತಿದ್ಸುಪಡಿ ಮಾಡಲು ಪ್ರಯತ್ನಿಸುವುದು ಈ ದೇಶಕ್ಕೆ ಮಾಡುವ ದೊಡ್ಡ ಅಪಮಾನವಾಗಿದೆ. ಅಷ್ಟೇ ಅಲ್ಲ ನಮ್ಮ ಪೂರ್ವಜರಿಗೆ ತೋರುವ ಮಹಾ ಅಗೌರವ ಎಂದು ಹೇಳಿದರು.

ಎಸ್ಸಿ/ ಎಸ್ಟಿ ನೌಕರರಿಗೆ ಮುಂಬಡ್ತಿ ಪ್ರಕರಣ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶ ಎದುರು ನೋಡುತ್ತಿದ್ದೇವೆ ಎಂದು ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !