ಶಿರಾ: ನಗರದ ಚಿಕ್ಕಕೆರೆ ಹಿಂಭಾಗದ ಬಾವಿಯಲ್ಲಿ ಮಹಿಳೆ ಮತ್ತು ಪುರುಷನ ಮೃತ ದೇಹ ಶುಕ್ರವಾರ ಪತ್ತೆಯಾಗಿದೆ.
ರೈತ ಬೊಪ್ಪಜ್ಜ ಅವರಿಗೆ ಸೇರಿದ ಬಾವಿಯಲ್ಲಿ ತುಮಕೂರಿನ ಟಿಪ್ಪು ನಗರದ ಅಮ್ಜದ್ ಪಾಷ (42) ಹಾಗೂ ಹಾಜಿರಾಬಿ (40) ಶವ ಪತ್ತೆಯಾಗಿದೆ.
ಅಮ್ಜದ್ ಪಾಷ ಪ್ರಕರಣವೊಂದರಲ್ಲಿ ಬೆಂಗಳೂರಿನಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದು, ವಾರದ ಹಿಂದೆ ಪೆರೋಲ್ ಪಡೆದು ಹೊರಗೆ ಬಂದಿದ್ದರು.
ಬಾವಿಯಲ್ಲಿ ಶವ ಇರುವ ಬಗ್ಗೆ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದಾಗ ಆಗ್ನಿಶಾಮಕ ದಳದ ಸಿಬ್ಬಂದಿ ಸಹಕಾರದಿಂದ ಶವಗಳನ್ನು ಹೊರ ತೆಗೆಯಲಾಯಿತು.
ಶಿರಾ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.