ಬೋನಿಗೆ ಬಿದ್ದ ಕರಡಿ

ಶನಿವಾರ, ಏಪ್ರಿಲ್ 20, 2019
29 °C

ಬೋನಿಗೆ ಬಿದ್ದ ಕರಡಿ

Published:
Updated:

ತೋವಿನಕೆರೆ: ಹಲವು ತಿಂಗಳಿನಿಂದ ಕೃಷಿಕರ ಆತಂಕಕ್ಕೆ ಕಾರಣವಾಗಿದ್ದ ಕರಡಿ ಗುರುವಾರ ರಾತ್ರಿ ಅರಣ್ಯ ಇಲಾಖೆ ಇಟ್ಟಿದ ಬೋನಿಗೆ ಬಿದ್ದಿದೆ.

ಸಮೀಪದ ಬರಕ ಗ್ರಾಮದಲ್ಲಿ ಕರಡಿ ಓಡಾಡುತ್ತಿರುವುದು ರೈತರ ಗಮನಕ್ಕೆ ಬಂದಿತ್ತು. ವಿಷಯವನ್ನು ಕೊರಟಗೆರೆ ತಾಲ್ಲೂಕು ಅರಣ್ಯ ಇಲಾಖೆಯ ಗಮನಕ್ಕೆ ತರಲಾಗಿತ್ತು. 15 ದಿನಗಳ ಹಿಂದೆ ಗ್ರಾಮದ ಶ್ರೀಶೈಲಾ ಹಣ್ಣಿನ ಫಾರಂನಲ್ಲಿ ಬೋನನ್ನು ಇಡಲಾಗಿತ್ತು. ಕರಡಿ ಬೋನಿಗೆ ಬಿದ್ದು, ಕಬ್ಬಿಣದ ಸರಳುಗಳನ್ನು ಬಗ್ಗಿಸಿ ತಪ್ಪಿಸಿಕೊಂಡಿತ್ತು. ಮತ್ತೆ ಅದೇ ಬೋನನ್ನು ದುರಸ್ತಿಪಡಿಸಿ  3 ದಿನಗಳ ಹಿಂದೆ ತಂದು ಇಟ್ಟಿದರು.

ಗುರುವಾರ ರಾತ್ರಿ ಕರಡಿ ತೋಟದಲ್ಲಿರುವ ಮಾವು, ಸಪೋಟ ಹಣ್ಣುಗಳನ್ನು ತಿನ್ನಲು ಬಂದಾಗ ಬೋನಿನ ಒಳಗಡೆ ಇದ್ದ ಹಲಸಿನ ಹಣ್ಣಿನ ವಾಸನೆಗೆ ಹೋಗಿ ಒಳಗಡೆ ಸಿಕ್ಕಿ ಕೊಂಡಿದೆ.

ಶುಕ್ರವಾರ ಬೆಳಗಿನ ಜಾವ ವಿಷಯ ತಿಳಿದ ವಲಯ ಅರಣ್ಯಾಧಿಕಾರಿ ಸತೀಶ್ ಚಂದ್ರ ಮತ್ತು ನಾಗರಾಜು ಸಿಬ್ಬಂದಿ ಸಮೇತ ಬಂದು ಬೋನಿನ ಸಮೇತ ಕರಡಿಯನ್ನು ಬೇರೆಡೆಗೆ ಸಾಗಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !