ಸೋಮವಾರ, ಜೂನ್ 14, 2021
26 °C

ಶಿರಾ: ಇಬ್ಬರು ಬೈಕ್‌ ಸವಾರರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಾ: ತಾಲ್ಲೂಕಿನ ಚಿನ್ನೇನಹಳ್ಳಿ ಗ್ರಾಮದ ಗಂಗಮ್ಮನ ಕೆರೆ ಬಳಿ ಸೋಮವಾರ ಎರಡು ದ್ವಿಚಕ್ರವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಾಲ್ಲೂಕಿನ ಗೌಡಗೆರೆ ಗ್ರಾಮದ ಹನುಮಂತೇಗೌಡ (35) ಮತ್ತು ತುಮಕೂರು ತಾಲ್ಲೂಕಿನ ಕೋರಾ ಹೋಬಳಿಯ ಗೌರಗೊಂಡನಹಳ್ಳಿಯ ರಾಮಯ್ಯ(40) ಮೃತಪಟ್ಟವರು.

ಗೌರಗೊಂಡನಹಳ್ಳಿಯ ರಾಮಕೃಷ್ಣಯ್ಯ ತೀವ್ರವಾಗಿ ಗಾಯಗೊಂಡಿದ್ದು, ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತೋವಿನಕೆರೆ- ಚಿನ್ನೇನಹಳ್ಳಿ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಹನುಮಂತೇಗೌಡ ದ್ವಿಚಕ್ರ ವಾಹನದಲ್ಲಿ ತೋವಿನಕೆರೆ ಕಡೆಗೆ ಹೋಗುತ್ತಿದ್ದರು. ಎದುರಿಗೆ ದ್ವಿಚಕ್ರವಾಹನದಲ್ಲಿ ರಾಮಯ್ಯ ಬರುತ್ತಿದ್ದರು. ಬೈಕ್‌ಗಳ ನಡುವೆ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ. 

ಕಳ್ಳಂಬೆಳ್ಳ ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.