ಸೋಮವಾರ, ಜನವರಿ 25, 2021
15 °C

ಕಬ್ಬು, ಗೆಣಸಿಗೆ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಾವಗಡ: ಸಂಕ್ರಾಂತಿ ಹಬ್ಬಕ್ಕಾಗಿ ತಾಲ್ಲೂಕಿನ ಜನರು ಕಬ್ಬು, ಗೆಣಸು, ಅವರೆಕಾಯಿ, ಶೇಂಗಾ ಖರೀದಿಸಲು ಬುಧವಾರ ಮುಗಿಬಿದ್ದರು.

ಕಬ್ಬಿನ ಕೋಲು ಒಂದಕ್ಕೆ ₹40 ರಿಂದ ₹100 ಇತ್ತು. ಗೆಣಸು ಕೆ.ಜಿಗೆ ₹40, ಶೇಂಗಾ ಕೆ.ಜಿಗೆ ₹60, ಅವರೆಕಾಯಿ, ಬಾರೆಕಾಯಿ ಕೆ.ಜಿ ₹50, ಕುಂಬಳಕಾಯಿ ₹40 ರಿಂದ ₹50ಗೆ ಮಾರಾಟವಾಯಿತು.

ಪಟ್ಟಣದ ಬಟ್ಟೆ ಅಂಗಡಿಗಳು ಜನರಿಂದ ತುಂಬಿ ಹೋಗಿತ್ತು. ಎಳ್ಳು ಬೀರಲು ಅಗತ್ಯವಿರುವ ಸ್ಟೀಲ್, ಪ್ಲಾಸ್ಟಿಕ್ ಡಬ್ಬಿಗಳನ್ನು ಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಶನೈಶ್ಚರ ದೇಗುಲಕ್ಕೆ ವಿವಿಧೆಡೆಯಿಂದ ಬುಧವಾರದಿಂದಲೆ ಭಕ್ತರು ಬಂದು ದರ್ಶನ ಪಡೆದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.