ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟ ಜಾತಿಯವರಿಗೆ ದೇಗುಲ ಪ್ರವೇಶ ನಿರಾಕರಣೆ: ಆರೋಪ

Last Updated 21 ಸೆಪ್ಟೆಂಬರ್ 2021, 22:42 IST
ಅಕ್ಷರ ಗಾತ್ರ

ಗುಬ್ಬಿ: ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಕ್ಕೆ ಪರಿಶಿಷ್ಟ ಜಾತಿಯವರಿಗೆ ಪ್ರವೇಶ ನಿರಾಕರಿಸಿರುವ ಘಟನೆ ತಾಲ್ಲೂ ಕಿನ ಕಡಬ ಹೋಬಳಿಯ ದಾಸರಕಲ್ಲಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಗ್ರಾಮದಲ್ಲಿರುವ ರಂಗನಾಥ ಸ್ವಾಮಿ ದೇಗುಲಕ್ಕೆ ಪರಿಶಿಷ್ಟ ಜಾತಿ ಯವರು ಪ್ರವೇಶಿಸಬಾರದು ಎಂದು ಮೇಲ್ಜಾತಿಯವರು ತಾಕೀತು ಮಾಡಿ ದ್ದಾರೆ ಎಂದು ದಾಸರಕಲ್ಲಹಳ್ಳಿಯ ಪರಿಶಿಷ್ಟ ಸಮುದಾಯದವರು ಆರೋಪಿ ಸಿದ್ದಾರೆ.

ಮುಜರಾಯಿ ಇಲಾಖೆಯಿಂದ ದೇವ ಸ್ಥಾನದ ಗೋಡೆಯ ಮೇಲೆ ಬರೆಸಿದ್ದ ನಾಮಫಲಕವನ್ನು ಮೇಲ್ಜಾತಿಯವರು ಅಳಿಸಿ ಹಾಕಿದ್ದಾರೆ. ಪರಿಶಿಷ್ಟರು ಒಳಗೆ ಪ್ರವೇಶಿಸದಂತೆ ನಿಯಂತ್ರಿಸುತ್ತಿದ್ದಾರೆ. ಅಧಿಕಾರಿಗಳು ಸೂಕ್ತ ರಕ್ಷಣೆ ನೀಡಿ, ದೇವಸ್ಥಾನದ ಗೋಡೆಯ ಮೇಲೆ ಮತ್ತೆ ಸೂಚನೆ ಬರೆಸಿ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು ಎಂದುಗ್ರಾ.ಪಂ. ಸದಸ್ಯ ಧನಂಜಯ್ ಆಗ್ರಹಿಸಿದ್ದಾರೆ.

ತಹಶೀಲ್ದಾರ್‌ ಸ್ಪಷ್ಟನೆ: ಘಟನೆ ಕುರಿತು ಪ್ರತಿಕ್ರಿಯಿಸಿದ ತಹಶೀಲ್ದಾರ್ ಆರತಿ, ದಾಸರಕಲ್ಲಹಳ್ಳಿಯಲ್ಲಿ ನಡೆದಿರುವ ಘಟನೆ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಪರಿಶೀಲಿಸಿದ್ದಾರೆ ಎಂದು ತಿಳಿಸಿದರು.

‘ದೇವಸ್ಥಾನದ ಗೋಡೆ ಮೇಲೆ ಅಳಿಸಿ ಹಾಕಿದ್ದ ನಾಮಫಲಕವನ್ನು ಮತ್ತೆ ಬರೆಸಲಾಗಿದೆ. ದೇವಸ್ಥಾನಕ್ಕೆ ಪ್ರವೇಶ ಮಾಡದಂತೆ ಯಾರನ್ನೂ ತಡೆದಿಲ್ಲ ಎಂದು ಗ್ರಾಮದ ಮೇಲ್ಜಾತಿಯವರು ತಿಳಿಸಿದ್ದಾರೆ. ಎಲ್ಲರಿಗೂ ಮುಕ್ತ ಅವಕಾಶ ಮಾಡಿಕೊಟ್ಟಿದ್ದಾರೆ ಎಂಬ ಮಾಹಿತಿ ಇದೆ. ಪೊಲೀಸರೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಮತ್ತೊಮ್ಮೆ ಪರಿಶೀಲನೆ ನಡೆಸಲಾಗುವುದು. ಎಲ್ಲರಿಗೂಮುಕ್ತ ಪ್ರವೇಶಕ್ಕೆ ಅವಕಾಶ ನೀಡಲಾಗು ವುದು’ ಎಂದರು.

ಮಗು ದೇಗುಲ ಪ್ರವೇಶಿಸಿದ್ದಕ್ಕೆ ದಂಡ:ಶಾಂತಿ ಸಭೆ ಬಳಿಕ ಪ್ರಕರಣ ಸುಖಾಂತ್ಯ
ಕೊಪ್ಪಳ: ಕುಷ್ಟಗಿ ತಾಲ್ಲೂಕಿನ ಹನಮ ಸಾಗರ ಸಮೀಪದ ಮಿಯಾಪುರದಲ್ಲಿ ಚನ್ನದಾಸರ ಸಮುದಾಯಕ್ಕೆ ಸೇರಿದ ಎರಡು ವರ್ಷದ ಮಗು ಆಟವಾಡುತ್ತಾ ಆಂಜನೇಯ ದೇವಾಲಯ ಪ್ರವೇಶಿಸಿದ ಘಟನೆಗೆ ಸಂಬಂಧಿಸಿದಂತೆ ಪಾಲಕರಿಗೆ ದಂಡ ವಿಧಿಸಿದ್ದ ಘಟನೆ ಸೆ. 4ರಂದು ನಡೆದಿದ್ದು, ಶನಿವಾರ ಶಾಂತಿ ಸಭೆ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.

ಗ್ರಾಮಕ್ಕೆ ಡಿವೈಎಸ್‌ಪಿ ರುದ್ರೇಶ ಉಜ್ಜನಕೊಪ್ಪ ತೆರಳಿ ಶಾಂತಿ ಸಭೆ ನಡೆಸಿ ಅಸ್ಪೃಶ್ಯತೆ ಆಚರಣೆ ಕುರಿತು ಗ್ರಾಮಸ್ಥರಿಗೆ ಕಠಿಣ ಎಚ್ಚರಿಕೆ ನೀಡಿ, ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿ ಹೇಳಿ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡು ಸುಖಾಂತ್ಯ ಹಾಡಿದ್ದಾರೆ.

ಏನಿದು ಪ್ರಕರಣ?: ಗ್ರಾಮದಲ್ಲಿ ಚನ್ನದಾಸರ ಸಮುದಾಯದಎರಡು ವರ್ಷದ ಮಗು ಆಕಸ್ಮಿಕವಾಗಿ ದೇವಸ್ಥಾನದ ಒಳಗೆ ಹೋಗಿತ್ತು. ಮಗುವಿನ ತಂದೆ ದೇವಸ್ಥಾನ ಪ್ರವೇಶಿಸಿ ಮಗುವನ್ನು ಹೊರಗೆ ಕರೆದುಕೊಂಡು ಬಂದಿದ್ದರು. ಇದನ್ನು ಗಮನಿಸಿದ್ದ ಗ್ರಾಮದ ಕೆಲವರು ಹಾಗೂ ಅರ್ಚಕರು ಸೇರಿ ಸೆ. 12ರಂದು ಸಭೆ ನಡೆಸಿ, ದೇವಸ್ಥಾನ ಮೈಲಿಗೆಯಾಗಿದೆ.

ಹೋಮ–ಹವನ ಮಾಡಿಸಿ ಸರಿ ಮಾಡಬೇಕು. ಅದಕ್ಕಾಗಿ ₹ 25 ಸಾವಿರ ದಂಡ ಹಾಗೂ ಧಾರ್ಮಿಕ ಕಾರ್ಯಗಳಿಗೆ ಖರ್ಚಾಗುವಹಣ ನೀಡುವಂತೆ ಷರತ್ತು ವಿಧಿಸಿದ್ದರು. ಇದನ್ನು ಖಂಡಿಸಿದ ಚನ್ನದಾಸರ ಸಮುದಾಯದವರು ತಮಗೆ ಆಗುತ್ತಿರುವ ಅನ್ಯಾಯ ತಡೆಯುವಂತೆ ಪೊಲೀಸರ ಮೊರೆ ಹೋಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT