ಗುರುವಾರ , ಮಾರ್ಚ್ 23, 2023
32 °C
ನಗರದ ವಿವಿಧೆಡೆ ಎಂಜಿನಿಯರುಗಳ ದಿನಾಚರಣೆ

ನೀರಾವರಿ ಯೋಜನೆಯಿಂದ ಅಭಿವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ರಾಷ್ಟ್ರದ ಸಮಗ್ರ ಅಭಿವೃದ್ಧಿಯಲ್ಲಿ ನೀರಾವರಿ ಯೋಜನೆಗಳು, ಕಾಲುವೆಗಳು ಪ್ರಮುಖವಾದ ಪಾತ್ರ ವಹಿಸುತ್ತವೆ ಎಂದು ಜಲ ಸಂಪನ್ಮೂಲ ಇಲಾಖೆ ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ಎಚ್.ಬಿ.ಮಲ್ಲೇಶ್ ಹೇಳಿದರು.

ತುಮಕೂರು ವಿಶ್ವವಿದ್ಯಾಲಯದ ಜಿ.ಎಸ್.ಪರಮಶಿವಯ್ಯ ಅಧ್ಯಯನ ಕೇಂದ್ರದಿಂದ ಮಂಗಳವಾರ ಎಂಜಿನಿಯರುಗಳ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ‘ನೀರಾವರಿ ಯೋಜನೆಯಲ್ಲಿ ಎಂಜಿನಿಯರ್‌ಗಳ ಪಾತ್ರ’ ಎಂಬ ಕುರಿತು ಮಾತನಾಡಿದರು.

ಸರ್ ಎಂ.ವಿಶ್ವೇಶ್ವರಯ್ಯ, ಜಿ.ಎಸ್.ಪರಮಶಿವಯ್ಯ ಶ್ರೇಷ್ಠ ಎಂಜಿನಿಯರ್‌ಗಳು. ಅವರ ಯೋಜನೆಗಳಾದ ನೀರಾವರಿ ಕಾಲುವೆ, ಹಳ್ಳ, ಅಣೆಕಟ್ಟು, ಜಲ ಸಂರಕ್ಷಣೆ, ಸಸ್ಯ ಸಂರಕ್ಷಣೆಯನ್ನು ಅಭಿವೃದ್ಧಿಯಲ್ಲಿ ಸೂಕ್ತವಾಗಿ ಬಳಸಿಕೊಂಡರೆ ಆಧುನಿಕ ಜ್ವಲಂತ ಸಮಸ್ಯೆಗಳನ್ನು ಹೋಗಲಾಡಿಸಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ, ‘ವಿಶ್ವೇಶ್ವರಯ್ಯ, ಜಿ.ಎಸ್.ಪರಮಶಿವಯ್ಯ ಅವರ ನೀರಾವರಿ ದೃಷ್ಟಿಕೋನ, ಧ್ಯೇಯವನ್ನು ಅಭಿವೃದ್ಧಿಯ ದೃಷ್ಟಿಯಲ್ಲಿ ಅಳವಡಿಸಿಕೊಂಡರೆ ಈಗ ಕಾಡುತ್ತಿರುವ ಹಸಿವು, ಜಲ ಸಮಸ್ಯೆ ನಿವಾರಿಸಬಹುದು’ ಎಂದು ಹೇಳಿದರು.

ಸಿಂಡಿಕೇಟ್ ಸದಸ್ಯ ಸುನಿಲ್ ಪ್ರಸಾದ್, ‘ವಿಶ್ವೇಶ್ವರಯ್ಯ ಅವರ ಆಡಳಿತಾತ್ಮಕ ಚಿಂತನೆ, ಕಲ್ಪನೆಗಳನ್ನು ಪೂರ್ಣವಾಗಿ ಅಳವಡಿಸಿಕೊಂಡಾಗ ಯುವ ಜನತೆ ಯೋಗ್ಯವಾದ ಭವಿಷ್ಯ ಕಟ್ಟಿಕೊಳ್ಳಬಹುದು’ ಎಂದರು.

ಕುಲಸಚಿವ ಪ್ರೊ.ಕೆ.ಎನ್.ಗಂಗಾನಾಯಕ್, ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದ ಕಾರ್ಯನಿರ್ವಾಹಕ ಡಾ.ಬಿ.ರವೀಂದ್ರಕುಮಾರ್ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.