ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರ ಒಕ್ಕೂಟದಿಂದ ಧರಣಿ

Last Updated 25 ಅಕ್ಟೋಬರ್ 2019, 9:43 IST
ಅಕ್ಷರ ಗಾತ್ರ

ತುಮಕೂರು: ಮಧುಗಿರಿ ತಾಲ್ಲೂಕು ಅಂಗವಿಕಲರ ಅನುಷ್ಠಾನ ಸಮಿತಿಯಿಂದ ಎಂ.ಆರ್.ಡಬ್ಲ್ಯು ಆಗಿ ನೇಮಕಗೊಂಡ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತ ನಾಗೇಶ್ ತಾಲ್ಲೂಕಿನ ಅಂಗವಿಕಲರಿಗೆ ಕಾನೂನು ಪ್ರಕಾರ ಲಭಿಸುವ ಸೌಲಭ್ಯಗಳನ್ನ ದೊರಕಿಸುತ್ತಿಲ್ಲ ಎಂದು ಆರೋಪಿಸಿ ಜಿಲ್ಲಾ ಪಂಚಾಯಿತಿ ಮುಂದೆ ಗುರುವಾರ ಮಧುಗಿರಿಯ ಪಂಡಿತ್ ಪುಟ್ಟರಾಜು ಗವಾಯಿ ತಾಲ್ಲೂಕು ಅಂಗವಿಕಲರ ಒಕ್ಕೂಟದ ನೇತೃತ್ವದಲ್ಲಿ ಅಂಗವಿಕಲರು ಧರಣಿ ನಡೆಸಿದರು.

2011ರಿಂದ ಅಂಗವಿಕಲರಿಗೆ ಸೌಕರ್ಯ ಕಲ್ಪಿಸಲು ₹ 5 ಸಾವಿರದಿಂದ ₹ 15 ಸಾವಿರ ಹಣ ವಸೂಲಿ ಮಾಡಿದ್ದಾರೆ. ಸರ್ಕಾರದಿಂದ ದೊರಕುವ ಸಾದನಾ ಸಲಕರಣೆಗಳು, ತ್ರಿಚಕ್ರ ವಾಹನ, ತ್ರಿಚಕ್ರ ಸೈಕಲ್, ಅಂಗವಿಕಲರ ಗುರುತಿನ ಚೀಟಿ ಪುಸ್ತಕ ನೀಡಲು, ವಿದ್ಯಾರ್ಥಿ ವೇತನ ಕೊಡಿಸಲು ಹೀಗೆ ನಾನಾ ರೀತಿಯ ಸೌಲಭ್ಯ ಕಲ್ಪಿಸುವಾಗ ಹಣ ಪಡೆದು ಭ್ರಷ್ಟಾಚಾರ ವೆಸಗಿದ್ದಾರೆ ಎಂದು ಆರೋಪಿಸಿದರು.

ಕರ್ತವ್ಯ ಲೋಪ, ಭ್ರಷ್ಟಾಚಾರ, ವಂಚನೆ ಮಾಡಿದ್ದು, ಕೂಡಲೇ ಇವರನ್ನು ವಜಾಗೊಳಿಸಿ ನ್ಯಾಯ ಒದಗಿಸಬೇಕು’ ಎಂದು ಒತ್ತಾಯ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT